ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸುವ ಹಾದಿಯಲ್ಲಿ ತಾಹಿರ್‌

ಬರ್ಮಿಂಗ್‌ಹ್ಯಾಮ್, ಜೂ 19 – ದಕ್ಷಿಣ ಆಫ್ರಿಕಾ ತಂಡದ ಉತ್ಸಾಹಿ ಲೆಗ್‌ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಅವರು ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಈ ಬಾರಿಯ ಐಸಿಸಿ ವಿಶ್ವಕಪ್‌ನಲ್ಲಿ ಇಂದು ನಡೆಯುವ 25ನೇ ಪಂದ್ಯದಲ್ಲಿ ಇತಿಹಾಸ ನಿರ್ಮಿಸುವ ಹಾದಿಯ್ಲಲಿದ್ದಾರೆ.

ಇಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಇಮ್ರಾನ್‌ ತಾಹಿರ್‌ ದಾಖಲೆ ನಿರ್ಮಿಸುವ ತುಡಿತದಲ್ಲಿದ್ದಾರೆ. ಕಿವಿಸ್‌ ಇನ್ನೇರಡು ವಿಕೆಟ್‌ ಪಡೆದರೆ ದಕ್ಷಿಣ ಆಫ್ರಿಕಾ ಪರ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಮೊದಲ ಬೌಲರ್ ಎಂಬ ದಾಖಲೆಗೆ 40ರ ಹರೆಯದ ತಾಹಿರ್ ಭಾಜನರಾಗಲಿದ್ದಾರೆ.

Leave a Comment