ಐವರು ಗಣ್ಯರಿಗೆ ಗೌರವ ಡಾಕ್ಟರೇಟ್

ಕರ್ನಾಟಕ ಕೇಂದ್ರೀಯ ವಿವಿ ಘಟಿಕೋತ್ಸವ 13 ರಂದು

( ನಮ್ಮ ಪ್ರತಿನಿಧಿಯಿಂದ)

ಕಲಬುರಗಿ ಜು 11: ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯವು  ನಾಡಿನ ಐದು ಜನ ಗಣ್ಯರಿಗೆ  ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಹಿರಿಯ ಸಂಶೋಧಕ ಡಾ ಎಂ ಚಿದಾನಂದಮೂರ್ತಿ,ಖ್ಯಾತ ಕಲಾವಿದ ನಾಡೋಜ ಡಾ ಜೆ ಎಸ್ ಖಂಡೇರಾವ,  ಸಾಹಿತಿ, ದಲಿತ ಚಳುವಳಿಗಾರ ಪ್ರೊ ಸಿದ್ದಲಿಂಗಯ್ಯ, ಬಾಹ್ಯಾಕಾಶ ವಿಜ್ಞಾನಿ ಡಾ ಟೆಸ್ಸಿ ಥಾಮಸ್ ಮತ್ತು ಖ್ಯಾತ ಭೌತವಿಜ್ಞಾನಿ ಡಾ ಬಿ ಆರ್ ಅಯ್ಯರ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ

ಜುಲೈ 13 ರಂದು ಬೆಳಿಗ್ಗೆ 10 ಗಂಟೆಗೆ  ಅಳಂದ ರಸ್ತೆ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿರುವ 3 ನೆಯ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವದು ಎಂದು ಸಿಯುಕೆ ಕುಲಪತಿ  ಪ್ರೊ ಎಚ್ ಎಂ ಮಹೇಶ್ವರಯ್ಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ( ಎಐಸಿಟಿಇ) ಅಧ್ಯಕ್ಷರಾದ ಪ್ರೊ ಅನಿಲ ಡಿ ಸಹಸ್ರಬುಧೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಿಕೋತ್ಸವ ಭಾಷಣ ಮಾಡುವರು. ಸಮ ಕುಲಪತಿ ಪ್ರೊ ಜಿ ಆರ್ ನಾಯಕ ಸೇರಿದಂತೆ ವಿವಿಯ ಉನ್ನತಾಧಿಕಾರಿಗಳು ಉಪಸ್ಥಿತರಿರುವರು. ಕುಲಾಧಿಪತಿ ಪ್ರೊ ಎನ್,ಆರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು

ಪದವಿ ಪ್ರದಾನ:

ಘಟಿಕೋತ್ಸವದಲ್ಲಿ ಒಟ್ಟು 910 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವದು.ಒಟ್ಟು 43 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದು ಕೊಂಡಿದ್ದಾರೆ. 21 ವಿದ್ಯಾರ್ಥಿಗಳು ಪಿಎಚ್‍ಡಿ ಪಡೆದಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಯುಕೆ  ಕುಲಸಚಿವ ಚಂದ್ರಕಾಂತ ಯಾತನೂರ ಹಾಗೂ ಇತರರಿದ್ದರು

Leave a Comment