ಐಫೆಲ್ ಟವರ್‌ನ ೨೫ ಮೆಟ್ಟಿಲು ಹರಾಜು

ಫ್ರಾನ್ಸ್‌ನ ಫ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಜಗತ್ತಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಇಂತಹ ಪ್ರಮುಖ ಪ್ರವಾಸಿ ತಾಣ ಐಫೆಲ್ ಟವರ್‌ನ ೨೫ ಮೆಟ್ಟಿಲುಗಳನ್ನು ೧.೩೪ ಕೋಟಿಗೆ ಹರಾಜು ಹಾಕಲಾಗಿದೆ. ಮೂಲ ಬೆಲೆಗಿಂತ ಮೂರು ಪಟ್ಟು ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಿದೆ. ೧೨೯ ವರ್ಷದ ಹಳೆಯ ಮೆಟ್ಟಿಲುಗಳನ್ನು ೧೪ ಅಡಿ ಎತ್ತರ ಮತ್ತು ೯೦೦ ಕಿ.ಗ್ರಾಂ. ತೂಕದ ೨೫ ಮೆಟ್ಟಿಲು ಹರಾಜಾಗಿದೆ. ಐಫೆಲ್ ಟವರ್ ಸಂಪರ್ಕ ಕಲ್ಪಿಸುವ ಎರಡು ಮಹಡಿಯನ್ನು ೧೯೮೩ ರಲ್ಲಿ ನಿರ್ಮಿಸಿ, ಲಿಫ್ಟ್ ಹಾಕಲಾಗಿತ್ತು.

chutukuabcde

ಗಗನಸಖಿ ಅವಾಂತರ

ಅಮೆರಿಕಾ ಏರ್‌ಲೈನ್ಸ್‌ನ ಗಗನಸಖಿ ಮಾಡಿದ ಅವಾಂತರಕ್ಕೆ ವಿಮಾನಯಾನ ಸಂಸ್ಥೆ ಕ್ಷಮೆ ಕೋರಿದೆ. ಗಗನಸಖಿ ತಮಾಷೆ ಮಾಡುವ ಉದ್ದೇಶದಿಂದ ೫ ವರ್ಷದ ಬಾಲಕಿಗೆ ಎಬಿಸಿಡಿಇ ಎಂದು ವಿಮಾನದ ಟಿಕೆಟ್‌ನಲ್ಲಿ ಮುದ್ರಿಸಿ, ಮಗುವಿನ ಜೊತೆಗೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ವಿಮಾನ ಏರಲು ಮುಂದಾಗುತ್ತಿದ್ದಂತೆ ಮಗುವಿನ ವಿಮಾನ ಟಿಕೆಟ್‌ನಲ್ಲಿದ್ದ ಹೆಸರು ನೋಡಿ ನಗಲು ಆರಂಭಿಸಿದ. ಇದರಿಂದ ಪೋಷಕರು ಮುಜುಗರದ ಸ್ಥಿತಿಗೆ ಒಳಗಾದರು. ಈ ವಿಷಯ ದೊಡ್ಡದಾಗುತ್ತಿದ್ದಂತೆ ವಿಮಾನಯಾನ ಸಂಸ್ಥೆ ಕ್ಷಮೆ ಕೋರಿದೆ.

chutukutiger-attack

ಮಹಿಳೆ ಮತ್ತು ಹುಲಿ

ಪ್ರಾಣಿ ಸಂಗ್ರಹಾಲಯಕ್ಕೆ ಹೋದಾಗ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲದಿದ್ದರೇ ಅನಾಹುತ ಕಟ್ಟಿಟ್ಟ ಬುತ್ತಿ. ಚೀನಾದ ಬೀಜಿಂಗ್‌ನಲ್ಲಿ ದಂಪತಿಗಳು ಪ್ರಾಣಿ ಸಂಗ್ರಹಾಲಯದ ಪಾರ್ಕ್‌ಗೆ ಹೋಗಿತ್ತು. ದಂಪತಿ ಇದ್ದ ಕಾರಿನ ಪಕ್ಕದಲ್ಲಿಯೇ ಸೌಬೀರಿಯನ್ ಹುಲಿ ಇತ್ತು.

ಹೊರಗಡೆ ದಂಪತಿ ಬಂದಿದ್ದನ್ನು ಗಮನಿಸಿದ ಹುಲಿ ಮಹಿಳೆಯನ್ನು ಕಾಡಿನೊಳಗೆ ಎಳೆದೊಯ್ದಿದೆ. ಈ ವೇಳೆ ಗಂಡ ಹುಲಿ ಜೊತೆ ಹೋರಾಡಿದ್ದಾನೆ. ಆದರೂ ಅಷ್ಟರ ವೇಳೆಗಾಗಲೇ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಆಕೆಯನ್ನು ರಕ್ಷಿಸುವ ಎಲ್ಲಾ ಕಾರ್ಯ ವಿಫಲವಾಯಿತು. ೨೦೧೪ ರಲ್ಲಿ ಇದೇ ಉದ್ಯಾನವನದಲ್ಲಿ ಹುಲಿಯೊಂದು ವ್ಯಕ್ತಿಯನ್ನು ಕೊಂದು ಹಾಕಿತ್ತು.

Leave a Comment