ಐಪಿಎಲ್ ರದ್ದಾಗುವ ಸಾಧ್ಯತೆ

 

ನವದೆಹಲಿ, ಮಾ ೨೪- ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ಈ ಬಾರಿ ಐಪಿಎಲ್ ಬಹುತೇಕ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ.

ಈಗಾಗಲೇ ಏಪ್ರಿಲ್ ೧೫ರ ವರೆಗೆ ಮುಂದೂಡಲ್ಪಟ್ಟಿರುವ ಐಪಿಎಲ್ ಈ ವರ್ಷ ನಡೆಯುವುದೇ ಅನುಮಾನವಾಗಿದೆ. ಇದಲ್ಲದೇ ಜುಲೈ ಹಾಗೂ ಸೆಪ್ಟಂಬರ್‌ನಲ್ಲಿ ನಡೆಸಲು ಚಿಂತೆ ನಡೆಸಲಾಗಿತ್ತು. ಆದರೆ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಪರಿಣಾಮ ಬಿಸಿಸಿಯ ಐಪಿಎಲ್ ರದ್ದುಗೊಳಿಸಲು ಸಾಧ್ಯತೆ ಹೆಚ್ಚಾಗಿದೆ. ಇನ್ನು ಬಿಸಿಸಿಐ, ಇಂದು ಫ್ರಾಂಚೈಸಿ ಮಾಲೀಕರೊಂದಿಗೆ ಕರೆದಿದ್ದ ಕಾನ್ಫರೆನ್ಸ್ ಕಾಲ್ ಸಭೆಯನ್ನು ರದ್ದುಗೊಳಿಸಿದೆ. ದೇಶದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಈ ಕ್ರಮ ಕೈಗೊಂಡಿದೆ.

ಜಾಗತಿಕ ಪಿಡುಗು ಕೊರೊನಾ ನಿತ್ಯ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಐಪಿಎಲ್ ಟೂರ್ನಿ ಬಹುತೇಕ ರದ್ದಾಗುವ ಸಾಧ್ಯತೆ ನಿಚ್ಚಳಗೊಳ್ಳುತ್ತಿದೆ. ಮಾನವೀಯತೆ ಮೊದಲು. ಉಳಿದೆಲ್ಲವೂ ನಂತರದ್ದು. ಸದ್ಯದ ಪರಿಸ್ಥಿತಿ ಸುಧಾರಣೆಯಾಗದಿರುವ ಕಾರಣ ಅದರ ಬಗ್ಗೆ ಮಾತುನಾಡುವುದರಲ್ಲಿ ಅರ್ಥವಿಲ್ಲ. ಐಪಿಎಲ್ ನಡೆಯದಿದ್ದರೆ ಇರಲಿ, ” ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ತಿಳಿಸಿದ್ದಾರೆ.

ಜತೆಗೆ ಈ ಸಮಯದಲ್ಲಿ ಯಾವುದನ್ನೂ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಇಡೀ ದೇಶವೇ ಸ್ತಬ್ಧವಾಗಿದೆ. ಐಪಿಎಲ್ ಗಿಂತ ನಾವು ಮುಖ್ಯವಾದ ವಿಷಯಗಳನ್ನು ಎದುರಿಸಬೇಕಿದೆ ಎಂದು ಮತ್ತೊಂದು ಫ್ರಾಂಚೈಸಿ ಮಾಲೀಕರೊಬ್ಬರು ಹೇಳಿದ್ದಾರೆ. ಐಪಿಎಲ್ ಮುಂದೂಡುವುದು, ಪಂದ್ಯಗಳನ್ನು ಕಡಿತಗೊಳಿಸುವುದು ಅಥವಾ ರದ್ದುಗೊಳಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲು ಬಿಸಿಸಿಐ ಕಾನ್ಫೆರೆನ್ಸ್ ಸಭೆ ಕರೆದಿತ್ತು. ಮುಂಬೈ ಮಾರ್ಚ್ ೨೯ರಂದು ಐಪಿಎಲ್ ೧೩ನೇ ಆವೃತ್ತಿ ಆರಂಭವಾಗಬೇಕಿತ್ತು. ಆದರೆ ಕೋವಿಡ್ -೧೯ ಭೀತಿಯಿಂದಾಗಿ ಟೂರ್ನಿಯನ್ನು ಮುಂದೂಡಲಾಗಿದೆ. ಆದರೆ ಬಿಸಿಸಿಐ ಪರಿಸ್ಥಿತಿ ಸುಧಾರಣೆಗೊಳ್ಳುವ ಆತ್ಮವಿಶ್ವಾಸದಲ್ಲಿ ದಿನ ದೂಡುತ್ತಿದೆ.

Leave a Comment