ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ-ಮುಂಬೈ ಮುಖಾಮುಖಿ

 

ನವದೆಹಲಿ, ಫೆ ೧೬ -ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ೧೩ನೇ ಆವೃತ್ತಿ ಆರಂಭವಾಗಲು ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ. ಈಗಾಗಲೇ ೨೦೨೦ರ ಐಪಿಎಲ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ ಎಂದು ಟೂರ್ನಿ ಆಯೋಜಕರು ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ ೨೯ ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಮುಂಬರುವ ಆವೃತ್ತಿಯಲ್ಲಿ ಶನಿವಾರ ಡಬಲ್ ಹೆಡರ್ ಪಂದ್ಯಗಳು ಇರುವುದಿಲ್ಲ. ಲೀಗ್ ನಡೆಯುವ ಐದು ದಿನಗಳಿಂದ ಆರು ದಿನಗಳಿಗೆ ವಿಸ್ತರಿಸಲಾಗಿದೆ.

ವಾರಾಂತ್ಯದಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಿಸಲಾಗುತ್ತದೆ. ಭಾನುವಾರ ಎರಡು ಪಂದ್ಯಗಳು ನಡೆದರೆ, ಶನಿವಾರ ಒಂದೇ ಪಂದ್ಯ ನಡೆಯಲಿದೆ.
ಕೊನೆಯ ಲೀಗ್ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಮೇ. ೧೭ ರಂದು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ದಿನದ ಪಂದ್ಯ ಸಂಜೆ ೪ ಗಂಟೆಗೆ ನಡೆಸಿದರೆ, ರಾತ್ರಿಯ ಪಂದ್ಯವನ್ನು ೮ ಗಂಟೆಗೆ ನಡೆಸಲಾಗುತ್ತದೆ. ಎಲ್ಲ ಫ್ರಾಂಚೈಸಿಗಳು ತಮ್ಮ ತವರು ಕ್ರೀಡಾಂಗಣದಲ್ಲಿ ಸೆಣಸಲಿವೆ. ರಾಜಸ್ಥಾನ್ ರಾಯಲ್ಸ್ ತಂಡ ಜೈಪುರ ಹಾಗೂ ಗುವಾಹಟಿ ಎರಡೂ ಮೈದಾನಗಳಲ್ಲಿ ಆಡಲಿದೆ.

Leave a Comment