ಐನಾತಿ ಸರಗಳ್ಳರ ಬಂಧನ

ಧಾರವಾಡ,ಡಿ 7- ಇಬ್ಬರು ಅಂತರ್ ರಾಜ್ಯ ಸರಗಳ್ಳರನ್ನು ಇಲ್ಲಿನ ಶಹರ ಠಾಣಾ ಪೊಲೀಸರು ಬಂಧಿಸಿ, ಬಂಧಿತರಿಂದ 7.3 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹರಿಹರದ ನಿವಾಸಿ ಸೈಯದ್ ಇರಾಣಿ ಹಾಗೂ ಕೊಲ್ಲಾಪುರದ ಮಹೇಶ ತಿವಡೆ ಎಂಬುವವರೇ ಬಂಧಿತ ಅಂತರ್ ರಾಜ್ಯ ಸರಗಳ್ಳರು.
ಇವರಿಬ್ಬರು ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡುತ್ತಿದ್ದರು.
ಒಟ್ಟು 9 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಇವರನ್ನು ಶಹರ ಠಾಣಾ ಪೊಲೀಸರು ಬಂಧಿಸಿ, 197 ಗ್ರಾಂ ಚಿನ್ನದ ಆಭರಣ, ಎರಡು ಬೈಕ್, 1 ಕಾರನ್ನು ವಶಪಡಿಸಿಕೊಂಡಿದ್ದಾರೆ.
ಈ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ ರಸೂಲಿ ಇರಾಣಿ ಎಂಬಾತನನ್ನು ಈ ಮೊದಲೇ ಬಂಧಿಸಲಾಗಿತ್ತು.

Leave a Comment