ಐದು ಭಾಷೆಯಲ್ಲಿ ನಾಳೆ ಕೆಜಿಎಫ್ ಟೀಸರ್ ಬಿಡುಗಡೆ

ಬೆಂಗಳೂರು,ನ.೮-ಕನ್ನಡ ಚಿತ್ರವೊಂದು ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆಯಲು ಸಜ್ಜಾಗಿದೆ. ಅದುವೇ ಯಶ್ ಅಭಿನಯದ ಕೆ.ಜಿಎಫ್ ಚಿತ್ರ.

ಕನ್ನಡ, ಹಿಂದಿ ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗಿರುವ ಬಹುಕೋಟಿ ವೆಚ್ಚದ ಚಿತ್ರದ ಬಗ್ಗೆ ದೇಶಾದಂತ ಕುತೂಹಲ ಮೂಡಿಕೊಂಡಿದೆ. ಬಾಲಿವುಡ್ ಚಿತ್ರಗಳನ್ನೇ ಹಿಂದಿಕ್ಕಿ ಕ್ರೇಜ್ ಹುಟ್ಟು ಹಾಕಿರೋ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಾಳೆ ನಗರದಲ್ಲಿ ನಡೆಯಲಿದೆ. ಈ ಕ್ಷಣವನ್ನು ಅರ್ಥಪೂರ್ಣವಾಗಿಸಲು ಹೊಂಬಾಳೆ ಸಂಸ್ಥೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.

ಕನ್ನಡ ಚಿತ್ರರಂಗ ಟೀಸರ್ ಬಿಡುಗಡೆಗೆ ಬೇರೆ ಭಾಷೆಯ ಪತ್ರಕರ್ತರನ್ನು ಆಹ್ವಾನಿಸುವುದೇ ಇಲ್ಲ, ಅಂತಹುದರಲ್ಲಿ ಕೆ.ಜಿಎಫ್ ಚಿತ್ರ ಇಡೀ ದೇಶದ ಸಿನಿಮಾ ಪತ್ರಕರ್ತರನ್ನು ಬೆಂಗಳೂರಿಗೆ ಆಹ್ವಾನಿಸಿದೆ.

ಟೀಸರ್ ಬಿಡುಗಡೆ ಸಮಾರಂಭಕ್ಕೆ ಮುಂಬೈ, ಕೇರಳ, ಅಂಧ್ರ ಮತ್ತು ತಮಿಳುನಾಡು ಸೇರಿದಂತೆ ಭಾರತದ ಎಲ್ಲ ರಾಜ್ಯಗಳ ಪತ್ರಕರ್ತರನ್ನು ಆಹ್ವಾನಿಸಿದ್ದು ಭಾರತೀಯ ಚಿತ್ರರಂಗದಲ್ಲಿಯೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ.

ಕನ್ನಡ ಚಿತ್ರರಂಗದ ಏಳಿಗೆಯ ದೃಷ್ಟಿಯಿಂದಲೇ ಕಾರ್ಯ ನಿರ್ವಹಿಸುತ್ತಾ ಬಂದಿರುವ ಈ ಸಂಸ್ಥೆ ಇದೀಗ ತನ್ನ ವ್ಯವಹಾರ, ಕಾರ್ಯ ವ್ಯಾಪ್ತಿಗಳನ್ನು ವಿಸ್ತಾರವಾಗಿಸಿಕೊಂಡಿದೆ. ಪ್ರತಿಭಾವಂತ ಯುವ ನಿರ್ದೇಶಕರು ಸೇರಿದಂತೆ ಎಲ್ಲರಿಗೂ ಅವಕಾಶ ಕೊಡುತ್ತಾ, ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿರೋ ಈ ಸಂಸ್ಥೆ ಕೆಜಿಎಫ್ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿಯೂ ತನ್ನ ಛಾಪು ಮೂಡಿಸಿಕೊಂಡಿದೆ

ನಿರ್ಮಾಪಕ ವಿಜಯ್ ಕಿರಗಂದೂರ್ ನಿರ್ಮಿಸಿರುವ ಕೆ.ಜಿ.ಎಫ್. ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ, ಛಾಯಾಗ್ರಹಣ ಭುವನ ಗೌಡ, ಸಂಗೀತ ರವಿ ಬಸ್ರೂರು, ಸಂಕಲನ ಶ್ರೀಕಾಂತ್, ಕಲಾ ನಿರ್ದೇಶನ, ಶಿವಕುಮಾರ್ ಸಾಹಸ ವಿಜಯ್, ರಾಜನ್ ಧ್ವನಿಗ್ರಹಣ, ಆನಂದ್ ಸೌಂಡ್ ಡಿಸೈನ್ ಮಾಡಿರುವ ಈ ಚಿತ್ರಕ್ಕೆ ಅನ್ಬು ಅರಿವು, ವಿಕ್ರಂ ಕಾರ್ಯಕಾರಿ ನಿರ್ಮಾಪಕರು. ಕಾರ್ತಿಕ್ ಗೌಡ, ರಾಮರಾವ್, ನಿರ್ಮಾಣ ನಿರ್ವಹಣೆ ಕೆ ಎಸ್ ಚಂಪಕಧಾಮ, ಎಸ್ ಕುಮಾರ್, ಕೀರ್ತನ್, ತಿಮ್ಮೇಗೌಡ, ಅಭಿಶೇಕ್ ಸಹ ನಿರ್ದೇಶನವಿರುವ ಈ ಚಿತ್ರಕ್ಕೆ ಸುಧೀಂದ್ರ ವೆಂಕಟೇಶ್ ಮಾಧ್ಯಮ ಪ್ರಚಾರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Leave a Comment