ಐತಿಹಾಸಿಕ ಸ್ಥಳ ಅತಿಕ್ರಮಣ – ಕ್ರಮಕ್ಕೆ ಒತ್ತಾಯ

ರಾಯಚೂರು.ಫೆ.13- ವಾರ್ಡ್ 11 ರಲ್ಲಿ ಬೇರೂನ್ ಕಿಲ್ಲಾ ಬಡಾವಣೆಯಲ್ಲಿ ಕಂದಕ ಹಾಗೂ ಐತಿಹಾಸಿಕ ರಾಜ್ ಕಾಲುವೆ ಸ್ಥಳ ಅತಿಕ್ರಮಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕ್ರಾಂತಿಯೋಗಿ ಬಸವೇಶ್ವರ ಸೇವಾ ಸಂಘ ಮನವಿ ನೀಡಿತು.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಪ್ರಾಬಲ್ಯ ಬಳಸಿ, ಕಂದಕ ಸ್ಥಳ ಅತಿಕ್ರಮಣ ಮಾಡುತ್ತಿದ್ದಾರೆ. ಮಹಿಳೆಯ ಶೌಚಾ ಪ್ರದೇಶವೂ ಅತಿಕ್ರಮಣಗೊಳಿಸಲಾಗುತ್ತಿದೆ. ಈ ಕುರಿತು ಕೇಳುವ ಸಾರ್ವಜನಿಕರಿಗೆ ಆವಾಚ್ಯವಾಗಿ ನಿಂದಿಸಲಾಗುತ್ತಿದೆ. ಆದ್ದರಿಂದ ತಕ್ಷಣವೇ ತಾವು ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಸ್ವತಃ ನಗರಸಭೆ ಸದಸ್ಯರಾದ ರತ್ನಪ್ರಶಾಂತಿ ಅವರು, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೆ.ರಾಜೇಶಕುಮಾರ, ಗುಂಡಪ್ಪ, ಶಿವಪ್ಪ, ತಿಮ್ಮಾರೆಡ್ಡಿ, ಮಲ್ಲಿಕಾರ್ಜುನ, ಬಸವರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment