ಐಟಿ ವಿಚಾರಣೆ ಎದುರಿಸಿದ ಬಳಿಕ ಮಾಜಿ ಡಿಸಿಎಂ ಪರಮೇಶ್ವರ್

 

ಬೆಂಗಳೂರು: ತಮ್ಮ ಮನೆ ಹಾಗೂ ಶಿಕ್ಷಣ ಸಂಸ್ಥೆ ಮೇಲೆ ನಡೆದಿದ್ದ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಡಿಸಿಎಂ ಹಾಲಿ ಶಾಸಕರಾದ ಡಾ.ಜಿ ಪರಮೇಶ್ವರ್‌ ಅವರು ಕ್ವೀನ್ಸ್ ರಸ್ತೆಯ ಬಳಿ ಇರುವ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.

ಸತತ ಮೂರು ಗಂಟೆ ನಡೆದ ವಿಚಾರಣೆ ಬಳಿಕ ಕಚೇರಿಯಿಂದ ಹೊರ ಬಂದು ಮಾಧ್ಯಮಗಳ ಜೊತೆ ಅವರು ಮಾತನಾಡಿದರು.ಇದೇ ವೇಳೆ ಅವರು ಮಾತನಾಡಿ, ಇವತ್ತು ಅಧಿಕಾರಿಗಳು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ರು ಹೀಗಾಗಿ ನಾನು ಇಂದು ಕಚೇರಿಗೆ ಆಗಮಿಸಿ ಐಟಿ ಅಧಿಕಾರಿಗಳು ಕೇಳಿದ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮತ್ತು ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದಂತೆ ಉತ್ತರ ನೀಡಿದ್ದೇನೆ ಅಂತ ಹೇಳಿದ ಅವರು ಐಟಿ ಅಧಿಕಾರಿಗಳು ಕೆಲ ಪ್ರಶ್ನೆಗಳನ್ನ ಕೇಳಿದ್ದರು ಅದಕ್ಕೆ ಸಂಬಂಧಪಟ್ಟಂತೆ ನಾನು ಅವರಿಗೆ ದಾಖಲೆ ಸಮೇತ ಉತ್ತರ ನೀಡಿರುವೆ ಅಂಥ ಹೇಳಿದರು. ಇನ್ನು ದಾಳಿಗೆ ಸಂಬಂಧಪಟ್ಟಂತೆ ನನ್ನ ಅಣ್ಣ, ಮಗನ ಆಪ್ತರ ಮನೆ ಮೇಲೆಯೂ ಸಹ ದಾಳಿ ನಡೆದಿದ್ದು, ಅವರು ಕೂಡ ವಿಚಾರಣೆಗೆ ಹಾಜರಾಗಿದ್ದರೆ ಅಂತ ಅವರು ಹೇಳಿದರು.

Leave a Comment