ಐಟಿ ದಾಳಿ’ ನಡೆಸಲು ದೇವೇಗೌಡರು ಪತ್ರ : ಕೆಎನ್ ರಾಜಣ್ಣ ‘ಹೊಸ ಬಾಂಬ್’

ತುಮಕೂರು : ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ನನ್ನ ಮೇಲೆ ರೈಡ್ ಮಾಡುವಂತೆ ತಿಳಿಸಿದ್ದಾರೆ. ಹೀಗಾಗಿ ನಾಳೆ ಅಥವಾ ನಾಡಿದ್ದು ಐಟಿ ದಾಳಿಯಾಗುತ್ತೆ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೆ ಎನ್ ರಾಜಣ್ಣ, ದೇವೇಗೌಡರೇ ನನ್ನ ಮೇಲೆ ಐಟಿ ದಾಳಿಗೆ ಪತ್ರ ಬರೆದಿರುತ್ತಾರೆ. ದೇವೇಗೌಡರು ಐಟಿ ದಾಳಿಗೆ ಪತ್ರ ಬರೆದ್ರೇ, ನಾನು ಪತ್ರ ಬರೆಯುತ್ತೇನೆ ಅವರ ಮೇಲೆ ದಾಳಿಗೆ ಆಗ್ರಹಿಸಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ದೇವೇಗೌಡರು ಐಟಿ ಅಧಿಕಾರಿಗಳಿಗೆ ಪತ್ರ ಬರೆದ ಹಿನ್ನಲೆಯಲ್ಲಿ ನಾಳೆ ಅಥವಾ ನಾಡಿದ್ದು ನನ್ನ ಮೇಲೆ ಐಟಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಲಿದ್ದಾರೆ. ಒಂದು ವೇಳೆ ದಾಳಿ ನಡೆಸಿದ್ದೇ ಆದರೇ ಅದಕ್ಕೆ ಹೆಚ್ ಡಿ ದೇವೇಗೌಡರೇ ನೇರ ಕಾರಣ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

Leave a Comment