ಐಟಿ ಅಧಿಕಾರಿಗಳಿಂದ ನಟ ವಿಜಯ್ ವಿಚಾರಣೆ

ಚೆನ್ನೈ, ಫೆ ೬-ತಮಿಳು ಚಿತ್ರರಂಗದ ಹಣಕಾಸು ಪೂರೈಕೆದಾರ ಅನ್ಬುಚೆಳಿಯನ್ ನಿವಾಸದ ಮೇಲೆ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ೨೫ ಕೋಟಿ ರೂ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ನಟ ವಿಜಯ್ ಅವರನ್ನು ಇಂದು ಕೂಡ ವಿಚಾರಣೆಗೆ ಗುತಿಪಡಿಸಿದ್ದಾರೆ.

ಮದುರೈನಲ್ಲಿರುವ ಅನ್ಬು ಚೆಳಿಯನ್ ನಿವಾಸ ಮತ್ತು ಎಜಿಎಸ್ ಸಿನಿಮಾ ಚಿತ್ರಮಂದಿರಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಸಿಕೊಂಡಿದ್ದರು. ಈ ಸಂದರ್ಭದಲ್ಲಿ ನಟ ವಿಜಯ್ ಅವರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ಮಾಡಿ ವಿಚಾರಣೆಗೆ ಗುರಿಪಡಿಸಿದ್ದರು.

ಹಣಕಾಸು ಲೇವಾದೇವಿದಾರ ಅನ್ಬು ಚೆಳಿಯನ್ ಮತ್ತು ನಟ ವಿಜಯ್ ನಡುವಣ ನಡೆದಿರುವ ಹಣಕಾಸು ವಹಿವಾಟಗಳ ಬಗ್ಗೆ ಲೆಕ್ಕಗಳು ತಾಳೆಯಾಗುತ್ತಿಲ್ಲ ಎಂಬ ಅಂಶವನ್ನು ಆದಾಯ ತೆರಿಗೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟನನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಎಜಿಎಸ್ ಸಿನಿಮಾ ವಿಜಯ್ ಅಭಿಯನಯದ ಬಿಗಿಲ್ ಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು. ೨೦೧೭ರ ಅಕ್ಟೋಬರ್‌ನಲ್ಲಿ ನಿರ್ಮಿಸಲಾಗಿದ್ದ ಮರ್ಸೆಲ್ ಸಿನಿಮಾಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಏಕೆಂದರೆ ಈ ಚಿತ್ರದಲ್ಲಿ ಜಿಎಸ್‌ಟಿ ಮತ್ತು ಅಧಿಕ ಮೊತ್ತದ ನೋಟುಗಳನ್ನು ನಿಷೇಧಿಸಿದ್ದ ಆಂಶಗಳಿತ್ತು ಆ ತುಣುಕುಗಳಿಗೆ ಕತ್ತರಿ ಹಾಕುವಂತೆ ಬಿಜೆಪಿ ಒತ್ತಾಯಿಸಿತ್ತು.

ಕಡ್ಲೂರು ಜಿಲ್ಲೆಯಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ನಟ ವಿಜಯ್ ಅವರಿಗೆ ಐಟಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಬಳಿಕ ಚೆನ್ನೈ ವಾಪಸ್ಸಾದ ನಂತರ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ್ದರು. ತಮಿಳುನಾಡಿನ ೩೮ ಕಡೆಗಳಲ್ಲಿ ಐಟಿ ಅಧಿಕಾರಿಗಳು ಶೋಧನಾ ಕಾಂii ನಡೆಸಿದ್ದರು.

Leave a Comment