ಐಎಸ್‌ಎಸ್‌ಎಫ್ ವಿಶ್ವಕಪ್: ಶೂಟರ್ ಮನು ಭಾಕರ್‌ಗೆ ಚಿನ್ನ

ಪುಟಿಯನ್, ನ.೨೧- ಚೀನಾದಲ್ಲಿ ನಡೆದ ವಿಶ್ವ ಐಎಸ್‌ಎಸ್‌ಎಫ್ ವಿಶ್ವಕಪ್‌ನ ೧೦ ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಯುವ ಶೂಟರ್ ಮನು ಭಾಕರ್ ಅವರು ಮತ್ತೊಂದು ಚಿನ್ನದ ಪದಕ ತಮ್ಮ ಮುಡಿಗೇರಿಸಿಕೊಂಡು ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಐಎಸ್‌ಎಸ್‌ಎಫ್ ವಿಶ್ವಕಪ್ ಇಂದು ನಡೆದ ಮಹಿಳೆಯರ ೧೦ ಮೀಟರ್ ಏರ್ ಪಿಸ್ತೂಲ್ ಫೈನಲ್ ಪಂದ್ಯಾವಳಿಯಲ್ಲಿ ಮನು ಭಾಕರ್ ಸ್ವರ್ಣ ಪಡೆದರು. ಒಟ್ಟಾರೆ ೨೪೪.೭ ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಚಿನ್ನ ಗಳಿಸಿದರು.

ಈ ವರ್ಷದ ವಿಶ್ವಕಪ್ ನಲ್ಲಿ ಮಹಿಳೆಯರ ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲನೆಯ ಚಿನ್ನದ ಪದಕ. ಇದರ ಹೊರತಾಗಿಯೂ, ಮನು ಭಾಕರ್ ಚಿನ್ನದ ಪದಕ ಗಳಿಸಲು ಗಳಿಸಿದಸ್ಕೋರು ಕಿರಿಯರ ವಿಶ್ವ ದಾಖಲೆಯನ್ನು ಮುರಿದರು. ಮತ್ತೊಂದೆಡೆ, ಐಎಸ್‌ಎಸ್‌ಎಫ್ ವಿಶ್ವಕಪ್ ನಲ್ಲಿ ೧೦ ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಹೀನಾ ಸಿಧು ನಂತರ ಚಿನ್ನದ ಪದಕ ಗಳಿಸಿದ ಎರಡನೇ ಭಾರತೀಯ ಶೂಟರ್ ಎನಿಸಿಕೊಂಡಿದ್ದಾರೆ.

ಇನ್ನೂ ಸೆರ್ಬಿಯಾದ ಜೊರಾನಾ ಅರುನೋವಿಕ್ ೨೪೧.೯ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಚೈನಾದ ಕಿಯಾನ್ ವಾಂಗ್ ೨೨೧.೮ ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡರು. ೧೦ ಮೀಟರ್ ಏರ್ ಪಿಸ್ತೂಲ್ನಲ್ಲಿ ಭಾರತದ ಪುರುಷರ ಶೂಟರ್ಗಳಾದ ಅಭಿಷೇಕ್ ವರ್ಮಾ ಮತ್ತು ಸೌರವ್ ಚೌಧರಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಮನು ಮತ್ತು ರಾಹಿ ಸರ್ನೋಬತ್ ಮಹಿಳೆಯರ ೨೫ ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಎಲವೆನಿಲ್‌ಗೂ ಚಿನ್ನ
ಇನ್ನು ೧೦ ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಎಲವೆನಿಲ್ ವಲರಿವನ್ ಚಿನ್ನದ ಪದಕ ಗಳಿಸುವ ಮೂಲಕ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈ ಮನು ಭಾಕರ್ ಪೈನಲ್ ಸ್ಪರ್ಧೆಯ ಬಳಿಕ ನಡೆದ ೧೦ ಮೀಟರ್ ಏರ್ ರೈಫಲ್‌ನಲ್ಲಿ ಎಲವೆನಿಲ್ ವಲರಿವನ್ ಸಹ ಚಿನ್ನ ಗಳಿಸಿದ ಸಾಧನೆ ಮಾಡಿದ್ದು, ಪುತಿಯಾನ್‌ನಲ್ಲಿ ಭಾರತೀಯ ಮಹಿಳಾ ಶೂಟರ್‌ಗಳು ಮಿಂಚಿದ್ದಾರೆ.

Leave a Comment