ಐಎಸ್ಎಸ್ಎಫ್ ವಿಶ್ವಕಪ್ ನಿಂದ ಹಿಂದೆ ಸರಿದ ಚೀನಾ, ಪಾಕಿಸ್ತಾನ

ನವದೆಹಲಿ, ಫೆ.18 -ಮಾರ್ಚ್ ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಐಎಸ್ಎಸ್ಎಫ್ ವಿಶ್ವಕಪ್ ಟೂರ್ನಿಯಿಂದ ಚೀನಾ ತನ್ನ ಹೆಸರನ್ನು ವಾಪಸ್ ಪಡೆದಿದೆ. ಇದರ ಬೆನ್ನಲ್ಲೆ ಪಾಕಿಸ್ತಾನ ಸಹ ತನ್ನ ಶೂಟರ್ ಗಳನ್ನು ಕಳುಹಿಸದಿರಲು ನಿರ್ಧರಿಸಿದೆ.
ಮಾರ್ಚ್ 15 ರಿಂದ ಕರ್ಣಿ ಸಿಂಗ್ ರೆಂಜ್ ನಲ್ಲಿ ರೈಫಲ್, ಪಿಸ್ತೂಲ್ ಹಾಗೂ ಶಾಟ್ ಗನ್ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕರೋನ್ ವೈರಸ್ ಹಿನ್ನಲೆ ವಿದೇಶಾಂಗ ಸಚಿವಾಲಯ ಹಾಗೂ ಆರೋಗ್ಯ ಸಚಿವಾಲಯಗಳು ಚೀನಾ ಆಟಗಾರರಿಗೆ ವೀಸ್ ನೀಡುವುದ ಕಠಿಣವಾಗಿತ್ತು. ಆದರೆ, ಇದಕ್ಕೂ ಮೊದಲೇ ಚೀನಾ ತನ್ನ ಹೆಸರನ್ನು ಹಿಂತೆಗೆದುಕೊಂಡಿದ್ದು, ಆಯೋಜಕರ ಕೆಲಸವನ್ನು ಸುಲಭ ಮಾಡಿದೆ.

ಈ ಬಗ್ಗೆ ಮಾತನಾಡಿರುವ ಭಾರತ ರೈಫಲ್ ಸಂಘದ ಅಧ್ಯಕ್ಷ ರಣವಿಂದರ್ ಸಿಂಗ್, “ಸ್ಪರ್ಧೆಯಿಂದ ಹೆಸರನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ಸಂಪೂರ್ಣವಾಗಿ ಚೀನಾದ್ದಾಗಿದೆ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇದು ಒಳ್ಳೆಯ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಆದಾಗ್ಯೂ, ಚೀನಾದ ಆಟಗಾರರಿಗಾಗಿ ಹೋಟೆಲ್ ಬುಕಿಂಗ್ ಸೇರಿದಂತೆ ಇತರ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅದೇ ಸಮಯದಲ್ಲಿ, ಪಾಕಿಸ್ತಾನದ ಶೂಟರ್ ಗಳು ಸಹ ದೆಹಲಿಗೆ ಬರುವುದಿಲ್ಲ. ಭಾರತವು ಕೊನೆಯ ಶೂಟಿಂಗ್ ವಿಶ್ವಕಪ್ ಅನ್ನು ಆಯೋಜಿಸಿದಾಗ, ಪಾಕಿಸ್ತಾನದ ಆಟಗಾರರಿಗೆ ವೀಸಾ ನೀಡಲು ಭಾರತ ಸರ್ಕಾರ ನಿರಾಕರಿಸಿತ್ತು” ಎಂದು ತಿಳಿಸಿದ್ದಾರೆ.

Leave a Comment