ಐಎಲ್ ಯು ರಾಜ್ಯ ಸಮ್ಮೇಳನದ ಅಂಗವಾಗಿ ಬಳ್ಳಾರಿಯಲ್ಲಿ ಪೂರ್ವಭಾವಿ ಸಿದ್ದತಾ ಸಭೆ

ಬಳ್ಳಾರಿ, ಜು.16: ಅಖಿಲ ಭಾರತ ವಕೀಲರ ಸಂಘದ (ಎಐಎಲ್ ಯು) 7ನೇ ಕರ್ನಾಟಕ ರಾಜ್ಯ ಸಮ್ಮೇಳನವು ಬರುವ ಆಗಸ್ಟ್ 19 ಮತ್ತು 20ರಂದು ಬಳ್ಳಾರಿ ನಗರದಲ್ಲಿ ನಡೆಯಲಿರುವ ಹಿನ್ನಲೆಯಲ್ಲಿ ಇಂದು ಪೂರ್ವಾಹ್ನ ಸಮ್ಮೇಳನದ ಪೂರ್ವಭಾವಿ ಸಿದ್ದತಾ ಸಭೆಯು ರಾಘವ ಕಲಾಮಂದಿರದಲ್ಲಿ ನಡೆಯಿತು.

ನಗರದ ಹಿರಿಯ ವಕೀಲರೂ ಆಗಿರುವ ಎಐಎಲ್ ಯು ಧುರೀಣ ಕೆ.ಕೋಟೇಶ್ವರರಾವ್ ಅವರ ನೇತೃತ್ವದಲ್ಲಿ ಸಮ್ಮೇಳನ ಸಿದ್ದತಾ ಸಭೆಯು ನಡೆಯಿತು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ (ಬಾರ್ ಕೌನ್ಸಿಲ್) ಮಾಜಿ ಅಧ್ಯಕ್ಷರಾದ ವೀ.ವಿ.ಸಂಘದ ಗೌರವ ಕಾರ್ಯದರ್ಶಿಗಳು ಆಗಿರುವ ಹಿರಿಯ ನ್ಯಾಯವಾದಿ ಉಡೇದ ಬಸವರಾಜ್, ಹಿರಿಯ ಲೆಕ್ಕ ಪರಿಶೋಧಕರಾದ ಜಯಪ್ರಕಾಶ್ ಜೆ.ಗುಪ್ತಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ನಿವೃತ್ತ ನೌಕರರ ಸಂಘದ ಧುರೀಣ ಗಾಂಧಿಭವನದ ಟಿ.ಜಿ.ವಿಠ್ಠಲ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಎಐಎಲ್ ಯು ಧುರೀಣ ಕೆ.ಕೋಟೇಶ್ವರಾವ್ ಮಾತನಾಡಿ, ಸಂಘವು ಬೆಳೆದು ಬಂದ ಬಗ್ಗೆ ತಿಳಿಸಿದರಲ್ಲದೇ ಸಂಘದ ಜನಪರ ನಿಲುವುಗಳ ಬಗ್ಗೆ ಮಾತನಾಡಿದರು.

ಎಐಎಲ್ ಯು ಸಂಘಟನೆಯ 7ನೇ ಕರ್ನಾಟಕ ರಾಜ್ಯ ಸಮ್ಮೇಳನವು ಬಳ್ಳಾರಿ ನಗರದ ಕಮ್ಮ ಭವನದಲ್ಲಿ ಬರುವ ಆಗಸ್ಟ್ 19 ಮತ್ತು 20 ರಂದು ಎರಡು ದಿನಗಳ ಕಾಲ ನಡೆಯಲಿದ್ದು, ರಾಜ್ಯದಾದ್ಯಂತ ವಿವಿಧೆಡೆಗಳಿಂದ 300ಕ್ಕೂ ಹೆಚ್ಚು ವಕೀಲ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹೈ ಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ಗಳ ನ್ಯಾಯಮೂರ್ತಿಗಳನ್ನು ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಅಲ್ಲದೇ ಪ್ರಖ್ಯಾತ ನ್ಯಾಯವಾದಿಗಳು ಕೂಡಾ ಆಗಮಿಸಲಿದ್ದಾರೆ ಎಂದರು.
ವಿಚಾರ ಸಂಕಿರಣ, ಚರ್ಚೆ, ಇನ್ನಿತರೆ ಕಾರ್ಯಕ್ರಮಗಳು ಎರಡು ದಿನಗಳ ಕಾಲ ನಡೆಯಲಿವೆ ಎಂದು ತಿಳಿಸಿದರು.

ಉಡೇದ ಬಸವರಾಜ್ ಮಾತನಾಡಿ, ಸಮ್ಮೇಳನ ಯಶಸ್ವಿಗೆ ಸಹಕರಿಸುವುದಾಗಿ ಅರ್ಥಪೂರ್ಣ ಚರ್ಚೆ ನಡೆಯಲಿದೆ ಎಂದರು. ಜಯಪ್ರಕಾಶ್ ಗುಪ್ತಾ ಮಾತನಾಡಿ, ವಕೀಲರ ರಾಜ್ಯ ಸಮ್ಮೇಳನದ ಯಶಸ್ವಿಗೆ ಸಹಕರಿಸುವುದಾಗಿ ಹೇಳಿದರು.

ಹಿರಿಯ ನ್ಯಾಯವಾದಿ ಕೆ.ನಾಗಭೂಷಣರಾವ್, ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಆರ್.ಸೋಮಶೇಖರಗೌಡ, ರಾಘವೇಂದ್ರ, ಎ.ಕರುಣಾನಿಧಿ (ಹೊಸಪೇಟೆ) ಸೇರಿದಂತೆ ರಾಘವ ಅಸೋಸಿಯೇಷನ್ ಕೆ.ಚೆನ್ನಪ್ಪ ಮತ್ತು ವಿವಿಧ ಸಂಘಟನೆಗಳ ಧುರೀಣರು, ಗುರುಸಿದ್ದಮೂರ್ತಿ, ಎಱ್ರೆಮ್ಮ, ಬಿ.ಎ.ಶಿಲ್ಪಾ, ಬಸವರಾಜ್ ಪುಣ್ಯ ಮೂರ್ತಿ, ಮತ್ತಿತರರು ಉಪಸ್ಥಿತರಿದ್ದರು.

Leave a Comment