ಐಎಂಎ ಹಗರಣ: 20 ಸಾವಿರಕ್ಕೂ ಅಧಿಕ ದೂರು ದಾಖಲು

ಬೆಂಗಳೂರು, ಜೂನ್ 13 – ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಮುಹ್ಮದ್ ಮನ್ಸೂರ್ ಖಾನ್ ಅವರ ವಿರುದ್ಧ ದೂರುಗಳ ಮಹಾಪೂರ ಹರಿದು ಬರುತ್ತಿದ್ದು, ಮೂರು ದಿನಗಳಲ್ಲಿ 20 ಸಾವಿರಕ್ಕಿಂತ ಅಧಿಕ ದೂರು ದಾಖಲಾಗಿವೆ.

ಮೊದಲನೇ ದಿನ 3,750, ಎರಡನೇ ದಿನ 8 ಸಾವಿರ ಹಾಗೂ ಮೂರನೇ ದಿನ 8,500 ದೂರುಗಳು ಸೇರಿ ಬುಧವಾರ 8,500 ದೂರುಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

ನಗರ ಸೇರಿದಂತೆ ನೆರೆ ರಾಜ್ಯಗಳಿಂದಲೂ ಹೂಡಿಕೆದಾರರು ದೂರು ನೀಡಲು ಬರುತ್ತಿದ್ದಾರೆ. ಮೊದಲು ಶಿವಾಜಿನಗರದ ಕಾಮತ್ ಹೋಟೆಲ್ ಪಕ್ಕದ ಚರ್ಚ್ ನಲ್ಲಿ ದೂರು ಸ್ವೀಕರಿಸಲಾಗಿದ್ದು, ನಂತರ ಶಾದಿ ಮಹಲ್ ಗೆ ಆ ಸ್ಥಳವನ್ನು ಸ್ಥಳಾಂತರಿಸಲಾಗಿತ್ತು. ಇಂದು ಕೆಎಸ್ ಕನ್ವೆನ್ಷನ್ ಹಾಲ್ ಪಕ್ಕದಲ್ಲಿರುವ ಗಣೇಶ್ ಭಾಗ್‌ ಸಭಾಂಗಣದಲ್ಲಿ ಬೆಳಿಗ್ಗೆಯಿಂದಲೇ ದೂರು ಸ್ವೀಕರಿಸಲಾಗುತ್ತಿದ್ದು, ಜನ ಸರತಿ ಸಾಲಿನಲ್ಲಿ ನಿಂತುಕೊಂಡು ದೂರು ನೀಡುತ್ತಿದ್ದಾರೆ.

ಐಎಂಎ ಸಂಸ್ಥೆಯ ಮಾಲೀಕ ಮುಹಮ್ಮದ್ ಮನ್ಸೂರ್ ಖಾನ್ ಮೂರು ದಿನಗಳ ಹಿಂದೆ ಆಡಿಯೋ ಒಂದನ್ನು ಅಜ್ಞಾನ ಸ್ಥಳದಿಂದ ನಗರ ಪೊಲೀಸ್ ಆಯುಕ್ತರಿಗೆ ಕಳುಹಿಸಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಇದರಿಂದ ಆತಂಕಗೊಂಡ ಹೂಡಿಕೆದಾರರು ಕಂಪನಿಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದರು.

Leave a Comment