ಐಎಂಎ ಮಾಲೀಕ ಮನ್ಸೂರ್ ವಿರುದ್ಧ ಮತ್ತೊಂದು ಎಫ್ಐಆರ್

ಬೆಂಗಳೂರು, ಜೂ 19 – ಸಾವಿರಾರು ಜನರಿಂದ ಹಣ ಪಡೆದು ವಂಚಿಸಿ ಪರಾರಿಯಾಗಿರುವ ಐಎಂಎ ಜ್ಯುವೆಲರ್ಸ್ ಮಾಲೀಕ ಮುಹ್ಮದ್ ಮನ್ಸೂರ್ ಖಾನ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಚಿನ್ನದ ವ್ಯಾಪಾರಿ ಅಂಕಿತ್ ಸಾಂಘ್ವಿ (31) ಎಂಬುವವರು ಮನ್ಸೂರ್ ಖಾನ್ ವಿರುದ್ಧ ವಂಚನೆ ಆರೋಪದಡಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನ್ಸೂರ್ ಖಾನ್, ಅಂಕಿತ್ ಅವರಿಂದ 9.83 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪಡೆದು ಕಂಪನಿ ಹೆಸರಿನಲ್ಲಿ ಚೆಕ್ ನೀಡಿ, ಡ್ರಾ ಮಾಡಿಕೊಳ್ಳುವಂತೆ ಹೇಳಿದ್ದರು. ಆದರೆ, ಅಂಕಿತ್ ಅವರಿಗೆ ಹಣ ದೊರಕಿಲ್ಲ. ನಂತರ ಅವರು ಜ್ಯುವೆಲರ್ಸ್ ಮಳಿಗೆಗೆ ಬಂದಾಗ ಕಂಪನಿ ಮುಚ್ಚಿದ್ದು, ಆತ ಪರಿವಾರ ಸಮೇತ ಪರಾರಿಯಾಗಿರುವ ವಿಷಯ ತಿಳಿದಿತ್ತು. ಹೀಗಾಗಿ ಚಿನ್ನ ಪಡೆದು ತಮಗೆ ಸುಮಾರು 9 ಕೋಟಿ ರೂ ವಂಚಿಸಿದ್ದಾನೆಂದು ಆರೋಪಿಸಿ ಮನ್ಸೂರ್ ಖಾನ್ ವಿರುದ್ಧ ಅವರು ದೂರು ದಾಖಲಿಸಿದ್ದಾರೆ.

Leave a Comment