ಏ.25 ರಿಂದ ರಾಜ್ಯಮಟ್ಟದ ಭಜನಾ ಸ್ಪರ್ಧೆ

ದಾವಣಗೆರೆ,ಏ.15: ಇದೇ ಏ.25ರಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಭಜನಾ ಸ್ಪರ್ಧೆ ಸಮಿತಿಯ ಸಂಘಟನಾ ಕಾರ್ಯದರ್ಶಿ ಎ. ಕೊಟ್ರಪ್ಪ ಕಿತ್ತೂರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ನಡೆಯುವ ಭಜನಾ ಸ್ಪರ್ಧೆಯಲ್ಲಿ ಹರಪನಹಳ್ಳಿ, ಜಗಳೂರು, ಬೆಳಗಾವಿ, ಘಟಪ್ರಭಾ, ಹಾವೇರಿ, ಕಡೂರು, ಬೀರೂರು, ಹಾಸನೆ ಸೇರಿದಂತೆ ಇನ್ನೂ ಹಲವು ಕಡೆಗಳಿಂದ 86 ತಂಡಗಳು ಭಜನಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮವನ್ನು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಎಸ್.ವಿ ಹಲಸೆ ಉದ್ಘಾಟಿಸುವರು, ತರಳಬಾಳು ಜಗದ್ಗುರು ಶಾಖಾಮಠದ ಪಟ್ಟಾಧ್ಯಕ್ಷರಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ದಿವ್ಯಸಾನ್ನಿಧ್ಯ ವಹಿಸುವರು,

ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು, ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು, ಪುರವರ್ಗ ಮಠ, ರಾಮಘಟ್ಟದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳವರು, ಯರಗುಂಟೆ ಶ್ರೀಕ್ಷೇತ್ರದ ಶ್ರೀ ಪರಮಪೂಜ್ಯ ಪರಮೇಶ್ವರ ಸ್ವಾಮಿಗಳವರು ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್.ಸಿ ವೇದಮೂರ್ತಿ, ಲಿಂಗರಾಜ್ ಬಿ. ಕಲ್ಪನಳ್ಳಿ, ಅಜಿತ್‍ಕುಮಾರ್ ಎಸ್. ನ್ಯಾಮತಿ ಮೊದಲಾದವರು ಉಪಸ್ಥಿತರಿದ್ದರು.

Leave a Comment