ಏಷ್ಯ ಕಪ್‌ಗೆ ರೋಹಿತ್ ಸಾರಥ್ಯ

ಮುಂಬೈ, ಸೆ ೧- ಇದೇ ಸೆ ೧೫ರಿಂದ ನಡೆಯಲಿರುವ ಏಷ್ಯ ಕಪ್ ಕ್ರಿಕೆಟ್ ಟೂರ್ನಿಗೆ ಟೀಮ್ ಇಂಡಿಯಾದ ತಂಡವನ್ನು ಪ್ರಕಟಿಸಲಾಗಿದೆ.

ಈ ಟೂರ್ನಿಗೆ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ತಂಡವನ್ನು ರೋಹಿತ್ ಶರ್ಮಾ ಅವರು ಮುನ್ನಡೆಸಲಿದ್ದಾರೆ. ಈ ಬಾರಿ ತಂಡದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಅವಕಾಶ ಕಲ್ಪಿಸಲಾಗಿದ್ದು, ಇತ್ತೀಚಿನ ಪಂದ್ಯಗಳಲ್ಲಿ ಉತ್ತಮ ಪದರ್ಶನ ನೀಡಿದ ಕರ್ನಾಟಕದ ಮತ್ತೊಬ್ಬ ಆಟಗಾರ ಮಯಾಂಕ ಆಗರ್‌ವಾಲ್ ಅವರು ಅವಕಾಶ ವಂಚಿತರಾಗಿದ್ದಾರೆ.

ಸೆ ೧೫ರಿಂದ ದುಬೈನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಟೂರ್ನಿಗೆ ೧೬ ಜನರನ್ನು ಒಳಗೊಂಡ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ರಾಜಸ್ತಾನದ ಎಡಗೈ ವೇಗದ ಬೌಲರ್ ಕಲೀಲ್ ಅಹ್ಮದ್ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.

 • ತಂಡ ಇಂತಿದೆ.
  ರೋಹಿತ್ ಶರ್ಮಾ( ನಾಯಕ)
  ಶಿಖರ್ ಧವನ್(ಉಪನಾಯಕ)
  ಕೆ.ಎಲ್.ರಾಹುಲ್
  ಅಂಬಾಟಿ ರಾಯುಡು
  ಮನೀಷ್ ಪಾಂಡೆ
  ಕೇದರ್ ಜಾಧವ್
  ಎಂ.ಎಸ್.ಧೋನಿ(ವಿಕೆಟ್ ಕೀಪರ್)
  ದಿನೇಶ್ ಕಾರ್ತಿಕ್
  ಹಾರ್ಧಿಕ್ ಪಾಂಡೆ
  ಕುಲ್ದೀಪ್ ಯಾದವ್
  ಯಜುವೇಂದ್ರ ಚಹಲ್
  ಅಕ್ಸರ್ ಪಟೇಲ್
  ಭುವನೇಶ್ವರ್ ಕುಮಾರ್
  ಜಪ್ರೀತ್ ಬ್ರೂಮ್
  ಶಾರ್ದೂಲ್ ಥಾಕೂರ್
  ಕಲೀಲ್ ಅಹ್ಮದ್

Leave a Comment