ಏಷ್ಯಾ ಹಾಕಿ: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ನವದೆಹಲಿ, ಅ ೨೧-ಮಸ್ಕಟ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಪುರುಷರ ಹಾಕಿ ಚಾಂಪಿಯನ್ ಟ್ರೋಫಿಯಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ೩-೧ ಗೋಲುಗಳಿಂದ ಮಣಿಸಿದೆ. ಈ ಮೂಲಕ ಭಾರತ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.
ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕಿಳಿದಿ ವಿಶ್ವದ ೧೩ನೇ ತಂಡ ಪಾಕಿಸ್ತಾನ ಆರಂಭದಲ್ಲೇ ಗೋಲು ಬಾರಿಸಿ ಭಾರತಕ್ಕೆ ಆಘಾತ ನೀಡಿತು. ವಿಶ್ವದಲ್ಲೇ ೫ನೇ ತಂಡವೆನಿಸಿರುವ ಭಾರತ, ಆಟದ ೨೪ನೇ ನಿಮಿಷದಲ್ಲಿ ನಾಯಕ ಮನ್‌ಪ್ರೀತ್ ಸಿಂಗ್ ಭರ್ಜರಿ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸಿತು.
೩೨ನೇ ನಿಮಿಷದಲ್ಲಿ ಮಂದೀಪ್ ಸಿಂಗ್ ಚಾಕಚಕ್ಯತೆಯಿಂದ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಇದಾದ ಬಳಿಕ ೪೨ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ಮೂರನೇ ಗೋಲು ಬಾರಿಸಿದರು. ಆಟದಲ್ಲಿ ಭಾರತದ ಪ್ರಭುತ್ವ ಸಾಧಿಸಿತಾದರೂ ನಾಲ್ಕನೇ ಗೋಲು ಗಳಿಸುವ ಕನಸು ಕೈಗೂಡಲಿಲ್ಲ.
ಪಾಕಿಸ್ತಾನ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತ್ತು. ಆದರೆ ಅದನನು ಪಿ.ಆರ್. ಶ್ರೀಜಿಶ್ ಯಶಸ್ವಿಯಾಗಿ ತಡೆದರು. ಅಂತಿಮವಾಗಿ ಭಾರತ ೩-೧ ಗೋಲುಗಳಿಂದ ಗೆಲುವು ಭರ್ಜರಿ ಜಯಗಳಿಸಿತು. ನಾಳೆ ನಡೆಯುವ ಪಂದ್ಯದಲ್ಲಿ ಭಾರತ, ಜಪಾನ್ ತಂಡವನ್ನು ಎದುರಿಸಲಿದೆ.

Leave a Comment