ಏಷ್ಯನ್ ಗೇಮ್ಸ್ ಈಕ್ವೆಸ್ಟ್ರಿಯನ್‌ನಲ್ಲಿ ಭಾರತಕ್ಕೆ ಎರಡು ಬೆಳ್ಳಿ

ಜಕಾರ್ತಾ, ಆ. ೨೬- ಇಲ್ಲಿ ನಡೆದಿರುವ 18ನೇ ಏಷ್ಯನ್ ಕ್ರೀಡಾಕೂಟದ ಈಕ್ವೆಸ್ಟ್ರಿಯನ್ ವಿಭಾಗದಲ್ಲಿ ಭಾರತಕ್ಕೆ ಎರಡು ರಜತ ಪದಕ ಲಭಿಸಿದೆ.
ಫೌದ್ ಮಿರ್ಜಾ ಮತ್ತು ಈಕೆಯ ಕುದುರೆ ಸ್ಪರ್ಧೆಯಲ್ಲಿ 26.40 ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿ ಪದಕ ಗಳಿಸುವಲ್ಲಿ ಯಶಸ್ವಿಯಾದರು.
ಜಪಾನ್‌ನ ಯಶೋಕಿ 22.70 ಅಂಕ ಗಳಿಸಿ ಚಿನ್ನದ ಪದಕ ಗಳಿಸಿದರೆ, ಥೈಲ್ಯಾಂಡ್‌ನ ಸ್ಪರ್ಧಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಮತ್ತೊಂದೆಡೆ ಭಾರತ ತಂಡ ಪ್ರತಿನಿಧಿಸಿದ್ದ ಸ್ಪರ್ಧೆಯಲ್ಲಿ ಭಾರತ 121.30 ಅಂಕ ಗಳಿಸಿ, 2ನೇ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿತು.
ಅದೇ ರೀತಿ ಜಪಾನ್ 82.40 ಅಂಕಗಳೊಂದಿಗೆ ಚಿನ್ನದ ಪದಕ ಗಳಿಸಿದರೆ, ಥೈಲ್ಯಾಂಡ್ ಕಂಚಿನ ಪದಕ ಗಳಿಸಿತು.
1981ರ ನಂತರ ಏಷ್ಯನ್ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತ ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ಗಳಿಸುವಲ್ಲಿ ಸಫಲವಾಗಿದೆ. ಇದರೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 7 ಚಿನ್ನ, 9 ಬೆಳ್ಳಿ, 17 ಕಂಚಿನ ಪದಕಗಳೊಂದಿಗೆ ಒಟ್ಟು 31 ಪದಕ ಗಳಿಸುವ ಮೂಲಕ ಪದಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ.

Leave a Comment