ಏಳು ಬೀಳುಗಳ ಸಮಾಗಮ

ಬೆಂಗಳೂರು, ಸೆ.೩- ರಾಜ್ಯದ 208 ಸ್ಥಳೀಯ ಸಂಸ್ಥೆಗಳ ಪೈಕಿ 105 ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿದೆ. ಒಂದು ಮತದ ಅಂತರದಲ್ಲಿ ಗೆಲವು, ಸೋಲು, ಹಾವು ಏಣಿಯಾಟ, ಅಪ್ಪ, ಮಗನ ವಿಜಯ. ಮರು ಏಣಿಕೆಯಲ್ಲಿ ಸಮಮತ ಅಲ್ಲದೆ ಇನ್ನು ಹಲವು ಸ್ವಾರಸ್ಯಕರ ಸಂಗತಿಗಳು ನಡೆದಿವೆ.

ಒಂದು ಮತದಿಂದ ಗೆಲುವು

ಬಳ್ಳಾರಿ ಜಿಲ್ಲೆಯ ಕುಡಿತಿನಿ ಪಟ್ಟಣ ಪಂಚಾಯ್ತಿಯ 5ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಕೆ.ಎಂ.ಹಾಲಪ್ಪ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅವರು 281 ಮತಗಳಿಸಿದರೆ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಬಿ.ಸ್ವಾಮಿ 280 ಮತ ಪಡೆದು ಒಂದು ಮತದಿಂದ ಪರಾಭವಗೊಂಡಿದ್ದಾರೆ.

ಬೀದರ್‌ನ ಹುಮನಾಬಾದ್ ತಾಲ್ಲೂಕಿನ ಹಳ್ಳಿಕೇಡ್ ಪುರಸಭೆ ಚುನಾವಣೆಯಲ್ಲಿ ಇಂತಹದ್ದೇ ವರದಿ ದಾಖಲಾಗಿದೆ.

ವಾರ್ಡ್ ನಂ.21 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರ್ಮತ್ ಬೇಗಂ ಒಂದು ಮತದಿಂದ ವಿಜಯಶಾಲಿಯಾಗಿದ್ದಾರೆ.

ಯಾರಿಗೆ ವಿಜಯಲಕ್ಷ್ಮಿ?

ಶಿವಮೊಗ್ಗ ನಗರಸಭೆಯ 15 ನೇ ವಾರ್ಡ್‌ನಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಸಮ ಮತಗಳು ಬಂದಿದ್ದು, ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಮತದಾನ ಮತಗಳ ಎಣಿಕೆ ವೇಳೆ ಜೆಡಿಎಸ್ ನ ರಾಜಶೇಖರ್ ಮತ್ತು ಕಾಂಗ್ರೆಸ್ ನ ಸತ್ಯನಾರಾಯಣ ಅವರಿಗೆ ತಲಾ 1708 ಮತಗಳು ಬಂದಿವೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದರು.

ನಂತರ ನಡೆದ ಮರು ಎಣಿಕೆಯಲ್ಲೂ ಇಬ್ಬರು ಸದಸ್ಯರಿಗೂ 1708 ಮತಗಳೇ ಬಂದವು. ಆಗ ಅಧಿಕಾರಿಗಳು ಕೂಡ ಗೊಂದಲಕ್ಕೆ ಒಳಗಾದರು.

ಅಂತಿಮವಾಗಿ ಅಧಿಕಾರಿಗಳು ಚೀಟಿ ಎತ್ತುವ ಮೂಲಕ ಹೊಸ ಸದಸ್ಯರು ಯಾರು ಎಂಬುದನ್ನು ನಿರ್ಧರಿಸುವುದಾಗಿ ಪ್ರಕಟಿಸಿದರು.

ಹರ್ಮತ್ ಬೇಗಂ 121 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ವಿಜಯಲಕ್ಷ್ಮಿ ನೆಹರು 120 ಮತಗಳನ್ನು ಪಡೆದು ಗೆಲುವಿನ ಗಡಿಯಲ್ಲಿ ನಿಂತಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಕಡಿಮೆ ಇರುವುದರಿಂದ ಇಲ್ಲಿ ಒಂದೊಂದು ಮತವೂ ಅಭ್ಯರ್ಥಿಗಳಿಗೆ ಅಮೂಲ್ಯವಾಗಿರುತ್ತದೆ.

ಜಿಲ್ಲೆಯ ಖಾನಾಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಅಪ್ಪ-ಮಗ ವಿಜಯ ಸಾಧಿಸುವ ಮೂಲಕ ಒಟ್ಟಿಗೆ ಪಟ್ಟಣ ಪಂಚಾಯಿತಿ ಪ್ರವೇಶಿಸಿ ಗಮನ ಸೆಳೆದಿದ್ದಾರೆ.

ಖಾನಾಪುರ ೧೨ನೇ ವಾರ್ಡ್‌ಗೆ ಸ್ಪರ್ಧಿಸಿದ್ದ ರಫೀಕ್ ಖಾನಾಪುರಿ ೪೭೫ ಮತಗಳ ಅಂತರದ ಜಯಭೇರಿ ಬಾರಿಸಿದೆ, ೧೭ನೇ ವಾರ್ಡ್‌ನಿಂದ ಕಣಕ್ಕಳಿದಿದ್ದ ರಫೀಕ್ ಪುತ್ರ ಮಝರ್ ಖಾನಾಪುರಿ ೨೮೬ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಜತೆಗೆ ಗುರುತಿಸಿಕೊಂಡಿದ್ದ ಖಾನಾಪುರಿ ಕುಟುಂಬ ಪಟ್ಟಣ ಪಂಚಾಯಿತಿಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿರುವುದು ಈ ಬಾರಿಯ ಚುನಾವಣೆಯ ವಿಶೇಷವೆನಿಸಿದೆ.

ಕೆಪಿಸಿಸಿ ಸದಸ್ಯರಾಗಿದ್ದ ರಫೀಕ್ ಖಾನಾಪುರಿ ಮೂರು ಸಲ ಖಾನಾಪುರ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ರಫೀಕ್ ಬದಲು ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ನೀಡಿದ್ದರು. ಹೀಗಾಗಿ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಫೀಕ್ ಖಾನಾಪುರೆ ರಾಜೀನಾಮೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ರಫೀಕ್ ಖಾನಾಪುರಿ ಖಾನಪುರ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಖಾನಾಪುರಿಯವರು ಮೂರನೇ ಬಾರಿಗೆ ಖಾನಪುರ ಪಟ್ಟಣ ಪಂಚಾಯಿತಿ ಸದಸ್ಯರಾಗುತ್ತಿದ್ದಾರೆ. ಇವರ ಪುತ್ರ ಮಝರ್ ಖಾನಾಪುರಿ ಇದೆ ಮೊದಲ ಬಾರಿಗೆ ಪಟ್ಟಣ ಪಂಚಾಯಿತಿ ಪ್ರವೇಶಿಸಿದ್ದಾರೆ.

ರೇಣುಕಾಚಾರ್ಯ ಆಕ್ರೋಶ

ಫಲಿತಾಂಶ ಹೊರಬೀಳುತ್ತದಂತೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ತಮ್ಮ ಬೆಂಬಲಿಗರೊಂದಗೆ ಮೆರವಣಿಗೆ ನಡೆಸಲು ಮುಂದಾಗುತ್ತಿದ್ದಂತೆ ಪೊಲೀಸರು ಅಡ್ಡಿಪಡಿಸಿದರು.

ವಿಜಯೋತ್ಸವ ಆಚರಿಸಲು ಅವಕಾಶ ನೀಡದೆ ಇದ್ದುದ್ದಕ್ಕೆ ರೇಣುಕಾಚಾರ್ಯ ಡಿವೈಎಸ್‌ಪಿ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು.

Leave a Comment