ಏಪ್ರಿಲ್ 23 ಹಾಗೂ 24 ರಂದು ಶ್ರೀ ಮಹದೇವಸ್ವಾಮಿಗಳ ಪಟ್ಟಾಭಿಷೇಕ

ತಿ.ನರಸೀಪುರ, ಏ:21- ಬೆನಕನಹಳ್ಳಿ ಗ್ರಾಮದ ಪಟ್ಟದ ಶ್ರೀ ನಂಜುಂಡಸ್ವಾಮಿಗಳವರ 25ನೇ ಸಂಸ್ಮರಣೆ ಹಾಗೂ ಶ್ರೀ ಮಹದೇವಸ್ವಾಮಿಗಳವರ ಪಟ್ಟಾಭಿಷೇಕ ರಜತ ಮಹೋತ್ಸವ ಮತ್ತು ನವೀಕೃತ ಕಟ್ಟಡದ ಸಂಪ್ರೋಕ್ಷಣೆ ಕಾರ್ಯಕ್ರಮ ಏಪ್ರಿಲ್ 23 ಹಾಗೂ 24 ರಂದು ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಬೆನಕಹಳ್ಳಿ ಪಟ್ಟದ ಮಠದ ಶ್ರೀ ಮಹದೇವಸ್ವಾಮೀಜೀ ತಿಳಿಸಿದರು.
ಪಟ್ಟಣದ ಮಠದ ಆವರಣದಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿ, ಏ.23 ರ ಭಾನುವಾರ ಬೆಳಿಗ್ಗೆ 5 ಗಂಟೆಗೆ ಪಟ್ಟದ ಬಸವಲಿಂಗಸ್ವಾಮಿಗಳು, ಶ್ರೀ ನಂಜುಂಡಸ್ವಾಮಿಗಳವರ ಗದ್ದುಗೆಯಲ್ಲಿ ರುದ್ರಾಭೀಷೇಕ, ಮಹಾಮಂಗಳಾರತಿ ನೇರವೇರಲಿದ್ದು, ನವೀಕೃತ ಶ್ರೀ ಮಠದ ಸಂಪ್ರೋಕ್ಷಣ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 4 ಗಂಟೆಗೆ ಶ್ರೀ ನಂಜುಂಡಸ್ವಾಮಿಗಳವರ ಬಾವಚಿತ್ರ, ಶ್ರೀ ಮಹದೇವಸ್ವಾಮಿಗಳವರ ಉತ್ಸವವನ್ನು ಮಂಗಳವಾದ್ಯ, ಕೊಂಬು.ಕಹಳೆ, ವೀರಗಾಸೆ, ಕಂಸಾಳೆ, ವಿವಿಧ ಜಾನಪದ ತಂಡಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗುವುದು.
ಏ,24 ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯವನ್ನು ಸುತ್ತೂರು ಶ್ರೀ ಶಿವರಾತ್ರಿದೇಶಿಕೇಂದ್ರಸ್ವಾಮಿಜೀವಹಿಸಲಿದ್ದು, ದಿವ್ಯಸಮ್ಮುಖ ಸಿದ್ದಗಂಗಾ ಮಠದ ಕಿರಿಯ ಶ್ರೀ ಸಿದ್ದಲಿಂಗಮಹಾಸ್ವಾಮಿಗಳವರು, ಅಧ್ಯಕ್ಷತೆಯನ್ನು ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣಸ್ವಾಮಿಜೀವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರು ಹೊಸ ಮಠದ ಶ್ರೀ ಚಿದಾನಂದಸ್ವಾಮಿಜೀ ನೇರವೇರಿಸಲಿದ್ದಾರೆ.
ಬಿಜಾಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರಸ್ವಾಮಿಜೀ, ವಾಟಾಳು ಶ್ರೀ ಸಿದ್ದಲಿಂಗಶಿವಾಚಾರ್ಯಸ್ವಾಮಿಜೀ ಶಿವರಾತ್ರಿ ರಾಜೇಂದ್ರ ಶ್ರೀಗಳವರ ಬಾವಚಿತ್ರ ಅನಾವರಣ, ದೇವನೂರು ಶ್ರೀ ಮಹಾಂತಸ್ವಾಮಿಜೀ ಶ್ರೀ ನಂಜುಂಡಸ್ವಾಮಿಗಳವ ಬಾವಚಿತ್ರ ಅನಾವರಣ, ಮಲ್ಲನಮೂಲೆ ಶ್ರೀ ಗುರುಕಂಬಳೇಶ್ವರ ಮಠದ ಶ್ರೀ ಚನ್ನಬಸವಸ್ವಾಮಿಜೀ ಬಸವೇಶ್ವರರ ಬಾವಚಿತ್ರ ಅನಾವಣಗೊಳಿಸುವರು, ಕುಂದೂರು ಮಠದ ಶ್ರೀ ಶರತ್‍ಚಂದ್ರಸ್ವಾಮಿಜೀ ಉಪನ್ಯಾಸ ನೀಡಲಿದ್ದು, ಬೆನಕನಹಳ್ಳಿ ಪಟ್ಟದ ಮಠಧ ಶ್ರೀ ಮಹದೇವಸ್ವಾಮಿಜೀ, ಚಿಕ್ಕಮಗಳೂರಿನ ಸಾಹಿತಿ ಚಟ್ನಹಳ್ಳಿ ಮಹೇಶ್ ಸೇರಿದಂತೆ ವಿವಿಧ ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಪತ್ರಿಕಾಗೊಷ್ಟಿಯಲ್ಲಿ ಗ್ರಾಮದ ಮುಖಂಡರಾದ ಜಯಶಂಕರ್, ಶಿವಣ್ಣ, ಗೌಡರ ಮಲ್ಲಪ್ಪ, ರವಿಕುಮಾರ್, ಇತರರು ಇದ್ದರು.

Leave a Comment