ಏಡ್ಸ್ ಸೋಂಕಿತ ವ್ಯಕ್ತಿ ವರದಿಗೆ ಅಧಿಕಾರಿಗಳ ಸ್ಪಂಧನೆ

ಸಿಂಧನೂರು.ಮೇ.೧೫- ನಗರದ ಎನ್.ಇ.ಕೆ.ಆರ್.ಟಿ.ಸಿ ಬಸ್ಸ್ ನಿಲ್ದಾಣದಲ್ಲಿ ಏಡ್ಸ್ ಸೋಂಕಿತ ರಾಜು ಎನ್ನುವ ವ್ಯಕ್ತಿ ಆಹಾರ,ಔಷಧಿಗಳಿಲ್ಲದೆ ತಿಂಗಳನಿಂದ ನಿಲ್ದಾಣದಲ್ಲಿ ನರಳಾಡುತ್ತಿದ್ದರು ಯಾರು ಗುರುತಿಸಿ ನೆರವಿಗೆ ಬಾರದ ಬಗ್ಗೆ ಮೇ ೧೧ ರಂದು ಸಂಜೆವಾಣಿಯಲ್ಲಿ ವರಧಿ ಪ್ರಕಟಿಸಲಾಗಿತ್ತು.
ಎನ್.ಇ.ಕೆ.ಆರ್.ಟಿ.ಸಿ ಜಿಲ್ಲಾಧಿಕಾರಿ ಕೊಟ್ರಪ್ಪ, ಘಟಕ ವ್ಯವಸ್ಥಾಪಕರಾದ ಸಿದ್ಧಪ್ಪ ವರಧಿಗೆ ಸ್ಪಂದಿಸಿ ನಿಲ್ದಾಣದ ನಿಯಂತ್ರಣ ಅಧಿಕಾರಿ ಈರಣ್ಣನಿಗೆ ರಾಜು ಎನ್ನುವ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವಂತೆ ಸೂಚನೆ ನೀಡಿದ್ದಾರೆ
ಮೇಲಾಧಿಕಾರಿಗಳ ಆದೇಶದ ಮೇರೆಗೆ ನಿಲ್ದಾಣದ ನಿಯಂತ್ರಣಾಧಿಕಾರಿ ಈರಣ್ಣ ರಾಜು ಎನ್ನುವ ವ್ಯಕ್ತಿಗೆ ಸ್ನಾನ ಮಾಡಿಸಿ ಸ್ವಂತ ಹಣದಲ್ಲಿ ಹೊಸ ಬಟ್ಟೆಯನ್ನು ಕೊಡಿಸಿ ೫೦೦ ರೂ, ಬಸ್ಸಚಾರ್ಜ ಕೊಟ್ಟು ಬಳ್ಳಾರಿ ವಿಮ್ಸ್ ಆಸ್ಪತ್ರೆ ಕಳುಹಿಸುವ ಮೂಲಕ ಮನವೀಯತೆ ಮೆರೆದ ಸಂಜೆವಾಣಿ ಕಳಕಳಿಗೆ ಘಟಕ ವ್ಯವಸ್ಥಾಪಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ರಮೇಶ ಕುನ್ನಟಗಿ, ಆಟೋಚಾಲಕ ಷಾ ಮಕಂದರ್ ,ಹಮಾಲಿಗಳಾದ ರಸುಲ್,ಮದರ್ ಸೇರಿದಂತೆ ಇನ್ನಿತರರು ರಾಜು ಎನ್ನುವ ವ್ಯಕ್ತಿಯನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಸುವಲ್ಲಿ ಶ್ರಮಿಸಿದರು.

Leave a Comment