ಏಡ್ಸ್ ನಿಯಂತ್ರಣ ಜನಜಾಗೃತಿ  ನಾಳೆಯಿಂದ

 

ಕಲಬುರಗಿ ಅ 18: ಎಚ್‍ಐವಿ ಏಡ್ಸ್ ನಿಯಂತ್ರಣ ಕುರಿತು  ಎರಡು ದಿನಗಳ ಮನೆ ಮನೆ ಜನ ಜಾಗೃತಿ ಅಭಿಯಾನ ನಾಳೆ ( ಅಕ್ಟೋಬರ್ 19)ಯಿಂದ  ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಆರಂಭವಾಗಲಿದೆ ಎಂದು ರಾಜ್ಯದ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದ ಜಂಟಿ ನಿರ್ದೇಶಕ ಡಾ ಸಂಜಯ ಪಾಟೀಲ ಮತ್ತು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.  ಎಂ ಕೆ ಪಾಟೀಲ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ಕಲಬುರಗಿ ಜಿಲ್ಲೆಯ 7 ತಾಲೂಕುಗಳ ಒಟ್ಟು 390132 ಮನೆಗಳಿಗೆ ಏಡ್ಸ್ ನಿಯಂತ್ರಣ ಕುರಿತು ಮಾಹಿತಿ ರವಾನಿಸಲಾಗುವದು ಜಿಲ್ಲೆಯ 1802  ಆಶಾ ಕಾಂiÀರ್iಕರ್ತೆಯರು ಪ್ರತಿ ಮನೆಗೆ ತೆರಳಿ  ಜಾಗೃತಿ ಮೂಡಿಸುವ ಕರಪತ್ರ ನೀಡುವರು.ಇಬ್ಬರ ಆಶಾ ಕಾರ್ಯಕರ್ತೆಯರ ಒಟ್ಟು 901 ತಂಡಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲಿವೆ

ಬಾಗಿಲುಕೋಟೆ, ಬೆಳಗಾವಿ,ರಾಯಚೂರು, ಕೊಪ್ಪಳ ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ.ನಂಜೇಗೌಡ,ಡಾ. ವಿವೇಕಾನಂದ ಮತ್ತು ಡಾ.ಸೋಮಶೆಖರ ಉಪಸ್ಥಿತರಿದ್ದರು.

 

Leave a Comment