‘ಏಕ್ ಲವ್ ಯಾ’ ಟೀಸರ್‌ನಲ್ಲಿ ಧಮ್ ಎಳೆದು ಸುದ್ದಿಯಾದ ರಚಿತಾರಾಮ್

ಬೆಂಗಳೂರು, ಫೆ 15- ಪ್ರೇಮಿಗಳ ದಿನದಂದು ಬಿಡುಗಡೆಯಾದ, ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಟೀಸರ್ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟಿ ರಚಿತಾ ರಾಮ್ ಸಿಗರೇಟ್ ಸೇದುವ ದೃಶ್ಯ ಕಂಡು ಪ್ರೇಕ್ಷಕರು ದಂಗಾಗಿದ್ದಾರೆ. ಅಷ್ಟೆ ಅಲ್ಲದೇ ಟೀಸರ್ ಬಿಡುಗಡೆಗೊಂಡ ಕೇವಲ ಒಂದು ಗಂಟೆಯಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ

ಪ್ರೇಮಿಗಳ ದಿನದ ಜತೆಗೆ ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ೪೦ ಯೋಧರು ಹುತಾತ್ಮರಾದ ದಿನವೂ ಆದ ಕಾರಣ ಟೀಸರ್ ನಲ್ಲಿ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಲಾಗಿದೆ

ಏಕ್ ಲವ್ ಯಾ ಮೋಷನ್ ಪೋಸ್ಟರ್ ನಲ್ಲಿ ಬಿಯರ್ ಬಾಟಲಿ ಹಿಡಿದಿದ್ದ ರಚಿತಾ ರಾಮ್ ಟೀಸರ್ ನಲ್ಲಿ ಸಿಗರೇಟು ಸೇದುವ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾರ ಈ ಅವತಾರದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಏಕ್ ಲವ್ ಯಾ ಟೀಸರ್ ಗಿಂತ ರಚಿತಾ ರಾಮ್ ದಮ್ ಎಳೆಯೋದೇ ಸುದ್ದಿಯಾಗಿಬಿಟ್ಟಿದೆ. ಅದೂ ಸಾಲದೆಂಬಂತೆ ಕೊನೆಯಲ್ಲಿ ಲಿಪ್ ಲಾಕ್ ದೃಶ್ಯವೂ ಇದೆ.

rachitha-ram3

ಇದರ ಬಗ್ಗೆ ರಚಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ’ಎಲ್ಲಾ ನಮ್ಮ ನಿರ್ಮಾಪಕರ ಕೃಪೆ’ ಎಂದು ಏಕ್ ಲವ್ ಯಾ ನಿರ್ಮಾಪಕಿ ರಕ್ಷಿತಾ ಪ್ರೇಮ್ ಮೇಲೆ ತಮಾಷೆಯಾಗಿ ದೂರಿಕೊಂಡಿದ್ದಾರೆ. ಅದೇನೇ ಇರಲಿ, ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ರಚಿತಾ ಇಲ್ಲಿ ಮತ್ತೊಂದು ರೀತಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಪ್ರೇಕ್ಷಕರು ಹುಬ್ಬೇರುವಂತೆ ಮಾಡಿದ್ದಾರೆ.

ನನಗೆ ಸಿಗರೇಟು ಸೇದಿ ಅಭ್ಯಾಸವಿಲ್ಲ. ಹೀಗಾಗಿ ಆ ಒಂದು ಶಾಟ್ ಗೆ ಎರಡು ಪ್ಯಾಕ್ ಸಿಗರೇಟು ಖಾಲಿ ಮಾಡಿದ್ದೇನೆ ಎಂದು ರಚಿತಾ ಬಹಿರಂಗಪಡಿಸುತ್ತಿದ್ದಂತೇ ಪಕ್ಕದಲ್ಲಿದ್ದ ನಿರ್ಮಾಪಕಿ ರಕ್ಷಿತಾ ಪ್ರೆಮ್ ಏನಿದು ಎಂದು ಅಚ್ಚರಿಗೊಳಗಾದರು. ಅಷ್ಟು ಸಿಗರೇಟು ಖಾಲಿ ಮಾಡಿದ ಮೇಲೆ ಎರಡು ದಿನ ಕೆಮ್ಮು ಬಂದಿತ್ತು ಎಂದೂ ರಚಿತಾ ಹೇಳಿಕೊಂಡಿದ್ದಾರೆ. ರಕ್ಷಿತಾ ಪ್ರೇಮ್ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ಅವರ ಸಹೋದರ ಅಭಿಷೇಕ್ ಅಭಿರಾಣಾ ಎಂಬ ಪಾತ್ರದಲ್ಲಿದ್ದಾರೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸ್ಯಾಂಡಲ್ ವುಡ್ ಪ್ರೇಕ್ಷಕರು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Leave a Comment