ಏಕೈಕ ಟೆಸ್ಟ್: ಮುಶ್ಫಿಕರ್ ರಹೀಂ ಶತಕ: ಫಾಲೊಆನ್ ಹೇರದ ಭಾರತಕ್ಕೆ ಆರಂಭ ಆಘಾತ

 

ಹೈದರಾಬಾದ್, ಫೆ.೧೨- ಮೊದಲ ಇನಿಂಗ್ಸ್‌ನಲ್ಲಿ ೨೯೯ ರನ್‌ಗಳಿಂದ ಮುನ್ನಡೆದರೂ ಫಾಲೊ-ಆನ್ ಹೇರದೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡದವರು ಏಕೈಕ ಕ್ರಿಕೆಟ್ ಟೆಸ್ಟ್‌ನ ನಾಲ್ಕನೆ ದಿನವಾದ ಭಾನುವಾರ ಊಟದ ನಂತರ ೧೨ ಓವರ್‌ಗಳಲ್ಲಿ ೨ ವಿಕೆಟ್‌ಗೆ ೬೨ ರನ್ ಮಾಡಿದ್ದರು.

ತಸ್ಕಿನ್ ಅಹ್ಮದ್ ೨೩ ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರನ್ನೂ (ವಿಜಯ್ ೧೦, ರಾಹುಲ್ ೭) ವಿಕೆಟ್‌ಕೀಪರ್ ಮುಶ್ಫಿಕರ್ ರಹೀಂ ನೆರವಿನಿಂದ ವಾಪಸು ಕಳುಹಿಸಿದರು.  ಚೇತೇಶ್ವರ ಪೂಜಾರ (೨೧ ಎಸೆಗಳಲ್ಲಿ ೪ ಬೌಂಡರಿಗಳಿದ್ದ ೨೦) ಹಾಗೂ ವಿರಾಟ್ ಕೊಹ್ಲಿ (೨೧ ಎಸೆತಗಳಲ್ಲಿ ೧ ಬೌಂಡರಿಯಿದ್ದ ೨೦) ೪೦ ರನ್‌ಗಳ ಜೊತೆಯಾಟದೊಡನೆ ಆಡುತ್ತಿದ್ದರು

ತಸ್ಕಿನ್ ಅಹ್ಮದ್ (೮) ಅವರು ೯ನೇ ವಿಕೆಟ್‌ಗೆ ೩೮ ರನ್ ಸೇರಿಸಿದ ಕ್ಯಾಪ್ಟನ್ ಮುಶ್ಪೀಕರ್ ರಹೀಂ (೨೬೨ ಎಸೆತಗಳಲ್ಲಿ ೨ ಸಿಕ್ಸರ್, ೧೬ ಬೌಂಡರಿಗಳಿದ್ದ ೧೨೭), ನಂತರ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಗೆ ಕ್ಯಾಚ್ ನೀಡಿ ಅಶ್ವಿನ್ ಅವರ ಇನ್ನೂರೈವತ್ತನೇ ಬಲಿಯಾದರು. ಅಶ್ವಿನ್ ಈ ವಿಕೆಟ್ ಮೂಲಕ ಅತಿ ಶೀಘ್ರದಲ್ಲಿ ೨೫೦ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡ ಬೌಲರ್ ಹೆಗ್ಗಳಿಕೆಗೆ ಪಾತ್ರರಾದರು.

ಶನಿವಾರ ೬ ವಿಕೆಟ್‌ಗೆ ೩೨೨ ರನ್ ಮಾಡಿದ್ದ ಬಾಂಗ್ಲಾದೇಶ ಇಂದು ಅದೇ ಮೊತ್ತಕ್ಕೆ ಮೊದಲ ಓವರ್‌ನಲ್ಲೇ ಮೆಹದಿ ಹಸನ್ ವಿಕೆಟ್ ಕಳೆದುಕೊಂಡಿತು. ಮೂರನೇ ದಿನವೇ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರು ಸಹಸ್ರ ರನ್ ಪೂರೈಸಿದ ಮುಶ್ಫಿಕರ್ ರಹೀಂ ಇಂದು ಯಾದವ್ ಬೌಲಿಂಗ್‌ನಲ್ಲಿ ಬೌಂಡರಿ ಮೂಲಕ ೨೩೫ ಎಸೆತಗಳಲ್ಲಿ ೫ನೇ ಶತಕ ಪೂರೈಸಿದರು. ಮುಶ್ಫಿಕರ್  ಎರಡು ಜೊತೆಯಾಟಗಳಲ್ಲಿ ಪಾಲ್ಗೊಂಡಿದ್ದರು. ಮೊದಲು ಶಕಿಬ್ ಅಲ್ ಹಸನ್ (೧೦೩ ಎಸೆಗಳಲ್ಲಿ ೧೪ ಬೌಂಡರಿಗಳಿದ್ದ ೮೨) ಜೊತೆ ೫ನೇ ವಿಕೆಟ್‌ಗೆ ೧೦೭ ರನ್ ಸೇರಿಸಿದ ಮುಶ್ಫಿಕರ್ (೨೦೬ ಎಸೆತಗಳಲ್ಲಿ ೧೨ ಬೌಂಡರಿಗಳಿದ್ದ ಅಜೇಯ ೮೧) ನಂತರ ೭ನೇ ವಿಕೆಟ್‌ಗೆ ಮೆಹೆದಿ ಹಸನ್ (೧೦೭ ಎಸೆತಗಳಲ್ಲಿ ೧೦ ಬೌಂಡರಿಗಳಿರುವ ೫೧) ಸಂಗಡ ೮೭ ರನ್ ಸೇರಿಸಿದ್ದರು.

ಭುವನೇಶ್ವರ್, ಮೆಹೆದಿ ಹಸನ್ ವಿಕೆಟ್ ಗಳಿಸಿದ ನಂತರ  ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ನೆರವಿನಿಂದ ತೈಜುಲ್ ಇಸ್ಲಾಂ ಅವರನ್ನು ಉಮೇಶ್ ಯಾದವ್ ಮೂರನೆಯ ಬಲಿಯಾಗಿಸಿಕೊಂಡರು.

ಸ್ಕೋರು ವಿವರ

ಭಾರತ, ೧ನೇ ಇನಿಂಗ್ಸ್:

೬ ವಿಕೆಟ್‌ಗೆ ೬೮೭ ಡಿಕ್ಲೇರ್ಡ್

ಬಾಂಗ್ಲಾದೇಶ, ೧ನೇ ಇನಿಂಗ್ಸ್: ೩೮೮

(ಶನಿವಾರ ೬ ವಿಕೆಟ್‌ಗೆ ೩೨೨)

ಮುಶ್ಫಿಕರ್ ರಹೀಂ ಸಿ ಸಾಹ ಬಿ ಅಶ್ವಿನ್ ೧೨೭, ಮೆಹೆದಿ ಹಸನ್ ಬಿ ಭುವನೇಶ್ವರ್ ೫೧, ತೈಜುಲ್ ಇಸ್ಲಾಂ ಸಿ ಸಾಹ ಬಿ ಉಮೇಶ್ ಯಾದವ್ ೧೦, ತಸ್ಕಿನ್ ಅಹ್ಮದ್ ಸಿ ರಹಾನೆ ಬಿ ರವೀಂದ್ರ ಜಡೇಜ ೮, ಕಮ್ರುಲ್ ಇಸ್ಲಾಂ ರಾಬ್ಬಿ ಔಟಾಗದೆ ೦, ಇತರೆ (ಲೆಬೈ ೧೫) ೧೫

ವಿಕೆಟ್ ಪತನ: ೧-೩೮ (ಸೌಮ್ಯ ಸರ್ಕಾರ್, ೧೧.೨), ೨-೪೪ (ತಮೀಮ್ ಇಕ್ಬಾಲ್, ೧೬.೪), ೩-೬೪ (ಮೊಮಿನುಲ್ ಹಕ್, ೨೪.೧), ೪-೧೦೯ (ಮಹ್ಮುದುಲ್ಲಾ, ೩೪.೪), ೫-೨೧೬ (ಶಕಿಬ್, ೬೨.೧), ೬-೨೩೫ (ರಹ್ಮಾನ್, ೭೧.೧), ೭-೩೨೨ (ಮೆಹದಿ ಹಸನ್, ೧೦೪.೪), ೮-೩೩೯ (ತಸ್ಕಿನ್ ಅಹ್ಮದ್, ೧೧೩.೫), ೯-೩೭೮ (ತಸ್ಕುನ್, ೧೨೪.೩), ೧೦-೩೮೮ (ಮುಶ್ಫಿಕರ್, ೧೨೭.೫)

ಬೌಲಿಂಗ್: ಭುವನೇಶ್ವರ್ ಕುಮಾರ್ ೨೧-೭-೫೨-೧; ಇಶಾಂತ್ ಶರ್ಮ ೨೦-೫-೬೯-೧; ಆರ್.ಅಶ್ವಿನ್ ೨೮.೫-೭-೯೮-೨; ಉಮೇಶ್ ಯಾದವ್ ೨೫-೬-೮೪-೩; ರವೀಂದ್ರ ಜಡೇಜ ೩೩-೮-೭೦-೨

ಭಾರತ, ೨ನೇ ಇನಿಂಗ್ಸ್:

೨ ವಿಕೆಟ್‌ಗೆ ೬೨

ಮುರಳಿ ವಿಜಯ್ ಸಿ ರಹೀಂ ಬಿ ತಸ್ಕಿನ್ ಅಹ್ಮದ್ ೭, ಕೆ.ಎಲ್.ರಾಹುಲ್ ಸಿ ರಹೀಂ ತಸ್ಕಿನ್ ಅಹ್ಮದ್ ೧೦, ಚೇತೇಶ್ವರ್ ಪೂಜಾರ ಬ್ಯಾಟಿಂಗ್ ೨೦, ವಿರಾಟ್ ಕೊಹ್ಲಿ ಬ್ಯಾಟಿಂಗ್ ೨೦, ಇತರೆ (ವೈ ೧) ೧

ವಿಕೆಟ್ ಪತನ: ೧-೧೨ (ವಿಜಯ್, ೩.೫), ೨-೨೩ (ರಾಹುಲ್, ೫.೪)

ಬೌಲಿಂಗ್: ತೈಜುಲ್ ಇಸ್ಲಾಂ ೬-೧-೨೯-೦; ತಸ್ಕಿನ್ ಅಹ್ಮದ್ ೬-೦-೨೯-೨

ಕ್ಯಾಪ್ಷನ್

ಚಿತ್ರ ೧: ಶತಕದ ಸಂಭ್ರಮದಲ್ಲಿ ಮುಶ್ಫಿಕರ್ ರಹೀಂ

ರವಿಚಂದ್ರನ್ ಅಶ್ವಿನ್ ಸಾಧನೆ

ಶನಿವಾರ ಮೊದಲ ವಿಕೆಟ್ ಪಡೆಯಲು ೧೪ ಓವರ್ ಕಾದಿದ್ದ ಭಾರತದ ಸ್ಪಿನ್ ಅಸ್ತ್ರ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂದು ವಿಕೆಟ್‌ಕೀಪರ್ ವೃದ್ಧಿಮಾನ್ ಸಾಹ ನೆರವಿನಿಂದ  ಮುಶ್ಫಿಕರ್ ಅವರನ್ನು ತಮ್ಮ ೨೫೦ನೇ ಬಲಿಯಾಗಿಸಿಕೊಂಡು ಬಾಂಗ್ಲಾ ಇನಿಂಗ್ಸ್‌ಗೆ ಮಂಗಳ ಹಾಡಿದರು. ಈ ವಿಕೆಟ್ ಎರಡೂವರೆ ಶತಕವನ್ನು ೪೫ನೇ ಟೆಸ್ಟ್‌ನಲ್ಲಿ ಸಾಧಿಸಿದ ಅಶ್ವಿನ್, ೪೮ ಟೆಸ್ಟ್‌ಗಳಲ್ಲಿನ ಡೆನಿಸ್ ಲಿಲ್ಲಿ ದಾಖಲೆಯನ್ನು ದಾಟಿದರು.

ಜನ್ಮ ದಿನ: ೧೯೮೬ರ ಸೆಪ್ಟಂಬರ್ ೧೭

ವಯಸ್ಸು: ೩೦ ವರ್ಷ ೧೪೮ ದಿನ

ಟೆಸ್ಟ್‌ಗಳು: ೪೫; ಇನಿಂಗ್ಸ್: ೮೩

ಟೆಸ್ಟ್ ಪ್ರವೇಶ: ೨೦೧೧ರ ನವೆಂಬರ್ ೬-೯, ವೆಸ್ಟ್ ಇಂಡೀಸ್ ವಿರುದ್ಧ ನವದೆಹಲಿಯಲ್ಲಿ.

ಚೊಚ್ಚಲು ವಿಕೆಟ್: ವೆಸ್ಟ್ ಇಂಡೀಸ್‌ನ ಡ್ಯಾರೆನ್ ಬ್ರಾವೊ ಬೌಲ್ಡ್

ಎಸೆತ: ೧೨೯೦೫

ನೀಡಿದ ರನ್: ೧೬೨೮೯

ವಿಕೆಟ್: ೨೫೦

ಇನಿಂಗ್ಸ್‌ನಲ್ಲಿನ ಅತ್ಯುತ್ತಮ: ೫೯ಕ್ಕೆ೭

ಟೆಸ್ಟ್‌ನಲ್ಲಿ ಅತ್ಯುತ್ತಮ: ೧೪೦ಕ್ಕೆ೧೩

ಬ್ಯಾಟಿಂಗ್: ೪ ಶತಕ, ೧೦ ಅರ್ಧ ಶತಕ ಗಳಿರುವ ೧೮೫೦; ಅತಿ ಹೆಚ್ಚು: ೧೨೪

ಕ್ಯಾಪ್ಷನ್

 

Leave a Comment