ಏಕಾಏಕಿ ಭೂಕುಸಿತ- ದಂಪತಿಗಳಿಬ್ಬರು ಪ್ರಾಣಾಪಾಯದಿಂದ ಪಾರು

ನರಗುಂದ,ಫೆ.8- ಏಕಾಏಕಿ ಭೂಕುಸಿತ ಸಂಭವಿಸಿದ್ದು ದಂಪತಿಗಳಿಬ್ಬರು ಅದೃಷ್ಟವಶಾತ ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದಲ್ಲಿಂದು ಬೆಳಿಗ್ಗೆ ಸಂಭವಿಸಿದೆ.
ಭೂ ಕುಸಿತ ಸಂಭವಿಸಿದ ಪರಿಣಾಮ ಶರಣಪ್ಪ ಹಾಗೂ ರೇಣವ್ವ ಎಂಬುವರು 10 ಅಡಿ ಕುಸಿದ ಭೂಮಿಯೊಳಗೆ ಬಿದ್ದಿದ್ದು ಅವರನ್ನು ಸಾರ್ವಜನಿಕರು ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಇಂದು ಕಸಬಾ ಓಣಿಯಲ್ಲಿ ಬೆಳಗಿನ ಜಾವ  ಸುಮಾರು 10 ಅಡಿಗಳಷ್ಟು ಭೂಮಿ ಏಕಾಏಕಿಯಾಗಿ ಕುಸಿದಿದೆ. ಈ ಕುಸಿದ ಭೂಮಿಯಲ್ಲಿ ದಂಪತಿಗಳಾದ ಶರಣಪ್ಪ, ರೇಣವ್ವ ಅವರು ಬಿದ್ದಿದ್ದು. ಪ್ರಾಣರಕ್ಷಣೆಗೆ ಕೂಗಲು ಪ್ರಾರಂಭಿಸಿದರು.
ಅಕ್ಕ ಪಕ್ಕದ ನಿವಾಸಿಗಳು ತಕ್ಷಣ ಈ ದೃಶ್ಯವನ್ನು ಗಮನಿಸಿ ದಂಪತಿಗಳ ರಕ್ಷಣೆಗೆ ಮುಂದಾಗಿ, ಹಗ್ಗದ ಸಹಾಯದಿಂದ ದಂಪತಿಗಳನ್ನು ಮೇಲೆತ್ತಿ ಪ್ರಾಣ ರಕ್ಷಣೆ ಮಾಡಿದರು.
ತಾಲೂಕಿನಲ್ಲಿ ಈ ರೀತಿ ಭೂ ಕುಸಿತ ಸಂಭವಿಸುತ್ತಿರುವುದು ಇದು ಮೂರನೇ ಬಾರಿ. ಈ ಬಗ್ಗೆ ತಾಲೂಕಿನ ನಿವಾಸಿಗಳು ಭಯಭಿತರಾಗಿದ್ದು, ಜಿಲ್ಲಾಡಳಿತಕ್ಕೆ ಈ ಬಗ್ಗೆ ಕೂಡಲೇ ಕ್ರಮ ಕೊಳ್ಳುವಂತೆ ಮನವಿ ಮಾಡಿದ್ದಾರೆ.

Leave a Comment