ಏಕಾಏಕಿ ಕೆಲಸದಿಂದ ವಜಾ: ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ

ಮೈಸೂರು ಜು 11. ನಗರದ ಮಹಾರಾಣಿ ಮಹಿಳಾ ವಿಜಾನ ಕಾಲೇಜಿನಲ್ಲಿ ಸಿ.ಡಿ.ಸಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದ 20 ಮಂದಿಯನ್ನು ಏಕಾಏಕಿ ತೆಗೆದು ಹಾಕಿರುವುದನ್ನು ಖಂಡಿಸಿ ನೊಂದ ನೌಕರರ ಒಕ್ಕೂಟದ ವತಿಯಿಂದ ಇಂದು ಬೆಳಗ್ಗೆ ಕಾಲೇಜು ಮುಂಬಾಗ ತಮಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಪ್ರತಿಭಟನಾಕಾರರು ನಮಗೆ ಕಾಲೇಜಿನಿಂದ ಪ್ರತಿ ಮಾಹೆ 5,500 ರೂ. ಗಳ ವೇತನ ನಿಗದಿಪಡಿಸಿದೆ. ಆದರೆ ಕಾಲೇಜಿನ ಪ್ರಾಂಶುಪಾಲರಾದ ಹೆಚ್. ಉದಯಶಂಕರ್ 3,500 ರೂ ಗಳನ್ನು ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ, ನಾವು ಕಳೆದ 10 ವರ್ಷಗಳಿಂದಲೂ ಇಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೂ ಕಾಲೇಜಿನ ಪ್ರಾಂಶುಪಾಲರು ನಮ್ಮನ್ನು ಏಕಾಏಕಿ ತೆಗೆದು ಹಾಕಿದ್ದಾರೆ ಇದರಿಂದ ನಮಗೆ ಬಹಳ ತೊಂದರೆಯಾಗಿದೆ ಎಂದು ಹೇಳಿದರಲ್ಲದೆ ಈ ದಿಸೆಯಲ್ಲಿ ನಮಗೆ ನ್ಯಾಯ ಸಿಗುವವರೆಗೂ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಹೇಮಂತ ಕುಮಾರ ಸೇರಿದಂತೆ ಇನ್ನಿತರ ನೌಕರರು ಪಾಲ್ಗೊಂಡಿದ್ದರು.

Leave a Comment