ಏಕರೂಪ ನಾಗರಿಕ ಸಂಹಿತೆಯ ಗುರಿ

ನವದೆಹಲಿ, ನ. ೧೦- ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧತಿ ಹಾಗೂ ಸುಪ್ರೀಂಕೋರ್ಟ್‌ನಲ್ಲಿಯೇ ಅಯೋಧ್ಯೆ ಭೂವಿವಾದ ಇತ್ಯರ್ಥ ಕುರಿತು ಬಿಜೆಪಿ ನೀಡಿದ್ದ ಭರವಸೆಗಳು ಒಂದೊಂದಾಗಿಯೇ ಈಡೇರುತ್ತಿದ್ದು, ಇದೀಗ ಸಮಾನ ನಾಗರಿಕ ಸಂಹಿತೆ, ಒಂದು ದೇಶ, ಒಂದು ಚುನಾವಣೆ ಬಿಜೆಪಿಯ ಮುಂದಿನ ಗುರಿ ಎನ್ನಲಾಗಿದೆ.

ರಾಮಮಂದಿರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏಕರೂಪ ನಾಗರೀಕ ಸಂಹಿತೆ ಜಾರಿಗೆ ಸಮಯ ಕೂಡಿ ಬಂದಿದೆ ಎಂದಿದ್ದಾರೆ.

ನ. 17 ರಂದು ರಂಜನ್ ಗೊಗೊಯ್ ನಿವೃತ್ತಿಯಾಗಲಿರುವುದರಿಂದ ಈ ಪ್ರಕರಣಗಳಿಗೆ ಇತಿಶ್ರೀ ಹಾಡುವರೇ ಎಂಬುದನ್ನು ಕಾದು ನೋಡಬೇಕಿದೆ. ನ. 15 ರಂದು ದೆಹಲಿ ಹೈಕೋರ್ಟ್‌ನಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿಯನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ನಡೆಯಲಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏಕರೂಪ ನಾಗರೀಕ ಸಂಹಿತೆ ಜಾರಿಗೆ ಈಗ ಸಮಯ ಕೂಡಿ ಬಂದಿದೆ ಎಂದು ಹೇಳಿದ್ದಾರೆ.

Leave a Comment