ಏಕಪಕ್ಷೀಯ ನಿರ್ಣಯ ಬೇಷರತ್ ಹಿಂಪಡೆಗೆ ಧರಣಿ

ರಾಯಚೂರು.ಆ.02- ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಏಕಪಕ್ಷೀಯ ನಿರ್ಣಯ ವಿರೋಧಿಸಿ ಹೈದ್ರಾಬಾದ್ ಕರ್ನಾಟಕ ಸಮಗ್ರಾಭಿವೃದ್ಧಿ 371 (ಜೆ) ಕಲಂ ಸಮರ್ಪಕ ಅನುಷ್ಠಾನಗೊಳಿಸುವಂತೆ ಹೈದ್ರಾಬಾದ್ ಕರ್ನಾಟಕ ಪ್ರಗತಿಪರ ಸಂಘಟನೆ ಒಕ್ಕೂಟ ನಗರದಲ್ಲಿ ಧರಣಿ ಸತ್ಯಾಗ್ರಹ ನಿರತವಾಗಿ ಒತ್ತಾಯಿಸಿತು.
ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯ ಆವರಣದಲ್ಲಿ ಸತ್ಯಾಗ್ರಹ ನಿತರವಾಗಿ ಒತ್ತಾಯಿಸಿದ ಸಂಘಟನೆ ಒಕ್ಕೂಟ, ಕೆಲ ಸಂಘಟನೆ ತಮ್ಮ ಸ್ವಾರ್ಥಕ್ಕಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಉತ್ತರ ಕರ್ನಾಟಕ ಬಂದ್ ಕರೆ ನೀಡಿರುವುದು ಅತ್ಯಂತ ಖಂಡನೀಯ. ಹಿರಿಯರ ಅವಿರತ ಹೋರಾಟ ಶ್ರಮವಾಗಿರುವ ಅಖಂಡ ಕರ್ನಾಟಕ ಬೇರ್ಪಡಿಸುವ ಹುನ್ನಾರ ಅಕ್ಷಮ್ಯ ಅಪರಾಧ.
ಮುಂಬೈ ಕರ್ನಾಟಕವನ್ನೇ ಉತ್ತರ ಕರ್ನಾಟಕವನ್ನಾಗಿ ಬಿಂಬಿಸುವ ರಾಜಕೀಯ ಬೆಳವಣಿಗೆ ಅತ್ಯಂತ ಖಂಡನೀಯವಾಗಿದ್ದು, ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸಬಾರದು. ರಾಜ್ಯ ಮಟ್ಟದ ಯಾವುದೇ ಕಛೇರಿಯನ್ನು ಬೆಳಗಾವಿಗೆ ಸ್ಥಳಾಂತರ ಮಾಡದಂತೆ ಒತ್ತಾಯಿಸಿದ ಒಕ್ಕೂಟ ಅನಿವಾರ್ಯ ಸಂದರ್ಭದಲ್ಲಿ ಬೆಳಗಾವಿ ಸಮಾನಾಂತರವಾಗಿ ಸಂಖ್ಯೆಯಷ್ಟೇ ಕಛೇರಿಗಳನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸ್ಥಳಾಂತರಿಸಬೇಕು.
ಭವಿಷ್ಯತ್ತಿನ ರಾಜ್ಯ ದೃಷ್ಟಿಯಿಂದ ರಾಜಕೀಯ ಅಧಿಕಾರಿಗಳ ಹಂಚಿಕೆಗೆ ಸೂಪ್ತ ಸೂತ್ರ ರಚಿಸಿ ಪ್ರತ್ಯೇತ ರಾಜ್ಯ ಬೇಡಿಕೆ ಏಕಪಕ್ಷೀಯ ನಿರ್ಣಯ ಬೇಷರತ್ ಹಿಂಪಡೆದು ಬೇಡಿಕೆ ಈಡೇರಿಕೆಯಲ್ಲಿ ವಿಫಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಅಣಿಯಾಗಲಾಗುವುದೆಂದು ಎಚ್ಚರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ನಗರಸಭೆ ಉಪಾಧ್ಯಕ್ಷ ಜಯಣ್ಣ, ಸದಸ್ಯರಾದ ಸೈಯದ್ ಶಾಲಂ, ಜಾದಳ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಎನ್.ಶಿವಶಂಕರ್ ವಕೀಲರು, ಸಂಘಟನೆ ಒಕ್ಕೂಟ ಸಂಚಾಲಕರಾದ ರಜಾಕ್ ಉಸ್ತಾದ್, ಬಸವರಾಜ ಕಳಸ, ಅಶೋಕಕುಮಾರ ಸಿ.ಕೆ.ಜೈನ್, ಶಿವಕುಮಾರ ಯಾದವ್, ನರಸಪ್ಪ ದಂ‌ಡೋರಾ, ಬಿ.ರಮೇಶ, ಕೆ.ಈ.ಕುಮಾರ, ಅಶೋಕ ಶೆಟ್ಟಿ, ಪ್ರಕಾಶ ವಕೀಲರು, ರಘುವೀರ ನಾಯಕ, ವೀರೇಶ ಹೀರಾ, ರವೀಂದ್ರನಾಥ ಪಟ್ಟಿ, ಮಹ್ಮದ್ ಅಬ್ದುಲ್ ಹೈಫಿರೋಜ್, ಮಾಸೂಮ್, ಎಂ.ವಿನೋದ ರೆಡ್ಡಿ ಇನ್ನಿತರರು ಉಪಸ್ಥಿತರಿದ್ದರು.

Leave a Comment