ಏಕದಿನ ಕ್ರಿಕೆಟ್ ನಲ್ಲಿ ವೇಗವಾಗಿ 2000 ರನ್ ಕಲೆ ಹಾಕಿದ ಸ್ಮೃತಿ

ನವದೆಹಲಿ, ನ.7 – ಸ್ಟಾರ್ ಮಹಿಳಾ ಬ್ಯಾಟ್ಸ್‌ಮನ್ ಸ್ಮೃತಿ ಮಂದನಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2000 ರನ್ ಗಳಿಸಿದ ಮೊದಲ ಭಾರತೀಯ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಈ ದಾಖಲೆಯ ದೃಷ್ಟಿಯಿಂದ ಪುರುಷರ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ಇಲ್ಲಿನ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಮಂದನಾ 74 ರನ್ ಬಾರಿಸಿ, ಪಂದ್ಯದ ಗೆಲುವಿನಲ್ಲಿ ಮಿಂಚಿದರು. ಇದರೊಂದಿಗೆ ಭಾರತ ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ.

ಮಹಿಳಾ ಬ್ಯಾಟ್ಸ್‌ಮನ್ 63 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 74 ರನ್ ಗಳಿಸಿದರು. ಅವರು 51 ಇನ್ನಿಂಗ್ಸ್‌ಗಳಲ್ಲಿ 2000 ರನ್ ಗಳಿಸಿದ್ದಾರೆ ಮತ್ತು ಬೆಲಿಂಡಾ ಕ್ಲಾರ್ಕ್ ಮತ್ತು ಮೆಗ್ ಲ್ಯಾನಿಂಗ್ ನಂತರ ಏಕದಿನ ಪಂದ್ಯಗಳಲ್ಲಿ ವೇಗವಾಗಿ 2000 ರನ್ ಗಳಿಸಿದ ಮೂರನೇ ಮಹಿಳಾ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 23 ವರ್ಷದ ಮಂದಾನ 51 ಏಕದಿನ ಪಂದ್ಯಗಳಲ್ಲಿ 43.08 ಸರಾಸರಿಯಲ್ಲಿ 2025 ರನ್ ಗಳಿಸಿದ್ದಾರೆ. ಅವರ ಏಕದಿನ ವೃತ್ತಿಜೀವನದಲ್ಲಿ ನಾಲ್ಕು ಶತಕಗಳು ಮತ್ತು 17 ಅರ್ಧಶತಕಗಳನ್ನು ಹೊಂದಿದ್ದಾರೆ.

ಭಾರತೀಯ ಮಹಿಳಾ ಮತ್ತು ಪುರುಷರ ಏಕದಿನ ಕ್ರಿಕೆಟ್ ನಲ್ಲಿ ವೇಗವಾಗಿ 2000 ರನ್ ಗಳಿಸಿದ ಹೆಗ್ಗಳಿಕೆ ಶಿಖರ್ ಧವನ್ ಅವರದ್ದಾಗಿದೆ. ಅವರು 48 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಯನ್ನು ಪೂರ್ಣಗೊಳಿಸಿದರೆ ವಿರಾಟ್ 53 ಇನ್ನಿಂಗ್ಸ್‌ಗಳಲ್ಲಿ ಈ ಸಂಖ್ಯೆಯನ್ನು ಮುಟ್ಟಿದರು. ಮಂದನಾ 51 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ದಾಖಲಿಸಿದ್ದಾರೆ.

ಮಹಿಳಾ ಕ್ರಿಕೆಟಿಗರಲ್ಲಿ ಅತಿ ವೇಗವಾಗಿ 2000 ರನ್ ಗಳಿಸಿದ ಆಸ್ಟ್ರೇಲಿಯಾದ ಬೆಲಿಂಡಾ ವಿಶ್ವದ ಅಗ್ರ ಆಟಗಾರ. ಅವರು 41 ಇನ್ನಿಂಗ್ಸ್‌ಗಳಲ್ಲಿ ಸ್ಕೋರ್ ಮಾಡಿದ್ದಾರೆ ಮತ್ತು ಅವರ ಸಹ ಆಟಗಾರ ಲ್ಯಾನಿಂಗ್ 45 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Leave a Comment