ಎ.ವಸಂತಕುಮಾರ ಅವರ 55ನೇ ಹುಟ್ಟು ಹಬ್ಬ

 ಪೌರ ಕಾರ್ಮಿಕರೊಂದಿಗೆ ವಿನೂತನ ಆಚರಣೆ
ರಾಯಚೂರು.ಮೇ.19- ತಂದೆ ಆರ್.ಆಂಜಿನೇಯ್ಯಲು ಅವರ ಸರಳತೆಯನ್ನು ಮೈಗೂಡಿಸಿಕೊಂಡು ರಾಜಕೀಯದಲ್ಲಿ ತಮ್ಮದೇಯಾದ ವರ್ಚಸ್ಸುನೊಂದಿಗೆ ಬೆಳೆದ ಜಿಲ್ಲಾ ಕಾಂಗ್ರೆಸ್ ಹಾಗೂ ಕಾಡಾ ಮಾಜಿ ಅಧ್ಯಕ್ಷರು ಮತ್ತು ಆರ್‌ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಎ.ವಸಂತಕುಮಾರ ಅವರು ತಮ್ಮ 55ನೇ ಹುಟ್ಟು ಹಬ್ಬವನ್ನು ಪೌರ ಕಾರ್ಮಿಕರೊಂದಿಗೆ ವಿನೂತನವಾಗಿ ಆಚರಿಸಿಕೊಂಡರು.

ಇಂದು ತಮ್ಮ ನಿವಾಸದ ಮುಂದೆ ಅವರ ಅಭಿಮಾನಿ ಬಳಗ ಆಯೋಜಿಸಿದ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಹುಟ್ಟು ಹಬ್ಬದ ಕೇಕ್‌ನ್ನು ಪೌರ ಕಾರ್ಮಿಕರಿಂದಲೇ ಕತ್ತರಿಸುವಂತೆ ಮಾಡುವ ಮೂಲಕ ವಿಶಿಷ್ಟವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಅತ್ಯಂತ ಕೆಳ ಹಂತದಿಂದ ಸಾಹಿತ್ಯ ಮತ್ತು ಸಂಸ್ಕೃತಿಕವಾಗಿ ಬೆಳೆದು ರಾಜಕೀಯದಲ್ಲಿ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರು, ನಗರಸಭೆ ಅಧ್ಯಕ್ಷರು ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮತ್ತು ಜನಪ್ರೀಯ ವ್ಯಕ್ತಿತ್ವದ ನಾಯಕರಾಗಿ ಜನ ಮಾನಸದಲ್ಲಿ ಉಳಿದುಕೊಂಡ ಆರ್.ಆಂಜಿನೇಯ್ಯ ಅವರ ಪುತ್ರರಾಗಿರುವ ಎ.ವಸಂತಕುಮಾರ ಅವರು ತಮ್ಮ ಹುಟ್ಟು ಹಬ್ಬವನ್ನು ಪೌರ ಕಾರ್ಮಿಕರೊಂದಿಗೆ ಆಚರಿಸಿಕೊಳ್ಳುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದರು.

ಬರಗಾಲದ ಹಿನ್ನೆಲೆಯಲ್ಲಿ ಹುಟ್ಟು ಹಬ್ಬ ಆಚರಣೆಯಿಂದ ದೂರು ಉಳಿದಿದ್ದರು. ಆದರೆ, ಅವರ ಅಭಿಮಾನಿ ಬಳಗ ಅವರದ್ದೆ ನಿವಾಸದ ಮುಂದೆ ವೇದಿಕೆ ಸಿದ್ಧಗೊಳಿಸಿ, ಹುಟ್ಟು ಹಬ್ಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪೂರ್ವ ಪೌರ ಕಾರ್ಮಿಕರನ್ನು ಸಮವಸ್ತ್ರದೊಂದಿಗೆ ಕಾರ್ಯಕ್ರಮಕ್ಕೆ ಬರ ಮಾಡಿಕೊಂಡು ಅವರ ಸಮ್ಮುಖದಲ್ಲಿ ಅವರಿಂದಲೇ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ವೈಶಿಷ್ಟವಾಗಿ ಆಚರಿಸಿಕೊಂಡರು.
ಎ.ವಸಂತಕುಮಾರ ಅಭಿಮಾನಿಗಳ ಬಳಗ ಇಂದಿನಿಂದ ಅಸ್ತಿತ್ವಕ್ಕೆ ಬಂದಿದ್ದು, ಅವರ ಹುಟ್ಟು ಹಬ್ಬದ ಅಂಗವಾಗಿ ನಗರದಲ್ಲಿ ಮೂರು ದಿನಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಆಂದೋಲನಕ್ಕೆ ಮುಂದಾಗಿದ್ದು, ಇದರೊಂದಿಗೆ ಇನ್ನಿತರ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಲು ಈ ಸಂದರ್ಭದಲ್ಲಿ ತೀರ್ಮಾನಿಸಿದ್ದಾರೆ. ಅವರ 55ನೇ ಹುಟ್ಟು ಹಬ್ಬಕ್ಕೆ ಅಪಾರ ಜನ ಸಮೂಹ ಆಗಮಿಸಿ ಅವರಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ನಗರಸಭೆ ಅಧ್ಯಕ್ಷೆ ಹೇಮಲತಾ ಪಿ.ಬೂದೆಪ್ಪ, ಆರ್‌ಡಿಎ ಅಧ್ಯಕ್ಷ ಜಿಂದಪ್ಪ, ನಗರಸಭೆ ಉಪಾಧ್ಯಕ್ಷ ಜಯಣ್ಣ, ನಗರಸಭೆ ಸದಸ್ಯರಾದ ಈಶಪ್ಪ, ಈರಪ್ಪಗೌಡ, ಎಂ.ಕೆ.ಬಾಬರ್, ಸೈಯದ್ ಶಾಲಂ, ನೂರ್ ಪಾಷಾ ಗುನ್ನು, ಶೇಖ್ ಮಹಿಬೂಬ್, ವೀರೇಶ ಬೂತಪ್ಪ, ರಜಿಯಾ ಬೇಗಂ, ಪಿ.ಬೂದೆಪ್ಪ, ಜೆ.ತಿಮ್ಮಪ್ಪ, ಜೆ.ಮಾರೆಪ್ಪ, ಆರ್.ರಾಮಸ್ವಾಮಿ, ನರಸಿಂಹಲು ಮಾಡಗಿರಿ, ಜೆ.ಅಂಜನ್ ಕುಮಾರ, ಸೋಹನಕುಮಾರ, ರಾಮಕೃಷ್ಣಾ ನಾಯಕ, ಬಿ.ಗೋವಿಂದು, ಪಿ.ಆಶಣ್ಣ, ಬಾಬು, ಬಿ.ರಮೇಶ, ಕೆ.ಈ.ಕುಮಾರ, ಜೆ.ತಿಮ್ಮಪ್ಪ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment