ಎ.ಆರ್.ರೆಹಮಾನ್‌ರ ಅಹಿಂಸಾ ಟ್ರಾಕ್ ಬಿಡುಗಡೆ

ಯು2 ಬ್ಯಾಂಡ್ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದು, ಅವರ ಆಗಮನವನ್ನು ಸ್ಮರಣಿಯವಾಗಿಸಲು ಖ್ಯಾತ ಸಂಯೋಜಕ ಎ.ಆರ್. ರೆಹಮಾನ್ ಕಂಪೋಸ್ ಮಾಡಿರುವ ‘ಅಹಿಂಸಾ’ ಶೀರ್ಷಿಕೆಯ ಹೊಸ ಟ್ರ್ಯಾಕ್ ಬಿಡುಗಡೆ ಮಾಡಲಾಗುತ್ತಿದೆ. ಈ ಟ್ರಾಕ್ ಇದೇ ಮೊದಲ ಬಾರಿಗೆ ಎಕ್ಸ್‌ಕ್ಲೂಸಿವ್ ಆಗಿ ಜಿಯೋ ಸಾವನ್ ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ.

ಜಾಗತಿಕವಾಗಿ ಸಾಕಷ್ಟು ಪ್ರಶಸ್ತಿಗಳಿಗೆ ಪಾತ್ರವಾಗಿರುವ ಜಿಯೋ ಸಾವನ್ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್ ತನ್ನ ಬಳಕೆದಾರರಿಗೆ ೫೦ ದಶಲಕ್ಷಕ್ಕೂ ಹೆಚ್ಚು ಹಾಡುಗಳನ್ನು ಕೇಳುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಬಾರಿ ಜಿಯೋ ಸಾವನ್ ತನ್ನ ಬಳಕೆದಾರರಿಗೆ ಎಕ್ಸ್‌ಕ್ಲೂಸಿವ್ ಆಗಿ ಅಹಿಂಸಾ ಹಾಡನ್ನು ಕೇಳುವ ಅವಕಾಶ ಮಾಡಿಕೊಡುತ್ತಿದೆ.

ಇತ್ತೀಚಿನ ವಿಶ್ವ ಸಂಗೀತವನ್ನು ಪ್ರಸ್ತುತಪಡಿಸುವ ಆಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಜಿಯೋ ಸಾವನ್ ಈ ಹಾಡಿನ ಮೂಲಕ ಭಾರತೀಯರಿಗೆ ಹೊಸ ಅನುಭವನ್ನು ನೀಡುತ್ತಿದೆ.

ಸಂಗೀತವು ಸಂಸ್ಕೃತಿಯಾಗಿದೆ – ಇದು ಜನರ ಮನಸ್ಥಿತಿಗಳನ್ನು ರೂಪಿಸಲು ಕಲೆ, ಕ್ರಿಯೆ, ಸಕಾರಾತ್ಮಕ ಬದಲಾವಣೆ ತರಲು ಅವಶ್ಯವಾಗಿದೆ. ಉತ್ತಮ ಸಂಗೀತ ಯಾವಾಗಲೂ ನಿಜವಾದ ಸಂದೇಶವನ್ನು ಹೊಂದಿರುತ್ತದೆ. ಉತ್ತಮ ಸಂಗೀತವನ್ನು ಜನರಿಗೆ ತಲುಪಿಸಲು ಸಂಗೀತದ ಭರವಸೆಯ ಹೆಚ್ಚಿಸಲು ಜಿಯೋ ಸಾವನ್ ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದೆ, ಅದರ ಭಾಗವಾಗಿ ಅಹಿಂಸಾ ಹಾಡನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ.

‘ಅಹಿಂಸಾ’ – ಅಹಿಂಸೆ ಸಂಸ್ಕೃತ ಪದವಾಗಿದ್ದು, ಭಾರತದ ಆಧ್ಯಾತ್ಮಿಕ ವೈವಿಧ್ಯತೆಯನ್ನು ತೋರಿಸುತ್ತದೆ, ಡಿಸೆಂಬರ್ ೧೫ರಂದು ಮುಂಬೈನಲ್ಲಿ ದಿ ಜೋಶುವಾ ಟ್ರೀ ಟೂರ್ ಆಗಮನವಾಗಲಿದ್ದು, ಈ ಹಿನ್ನಲೆಯಲ್ಲಿ ಎ.ಆರ್. ರಹಮಾನ್ ಈ ಹಾಡನ್ನು ಕಂಪೋಸ್ ಮಾಡಿದ್ದಾರೆ. ಈ ಹಾಡು ಲಾಂಚ್ ಆಗುವ ಮುನ್ನವೇ ಜಿಯೋದಲ್ಲಿ ಬಳಕೆಗೆ ಲಭ್ಯವಿರಲಿದೆ.

ವಿಶ್ವದ ಎರಡು ದೊಡ್ಡ ಕಲಾವಿದರಾದ ಯು೨ ಮತ್ತು ಎ.ಆರ್. ರೆಹಮಾನ್, ದಕ್ಷಿಣ ಏಷ್ಯಾದ ಸಂಗೀತ ಮತ್ತು ಕಲಾವಿದರಿಗೆ ಅತಿದೊಡ್ಡ ವೇದಿಕೆಯಾದ ಸಂಗೀತ ಸ್ಟ್ರೀಮಿಂಗ್ ಸೇವೆ ಮತ್ತು ಅಭಿವೃದ್ಧಿ ಜಿಯೋ ಸಾವನ್ ಜೊತೆಗೂಡಿ, ‘ಅಹಿಂಸಾ’ ರೂಪಿಸಿದ್ದಾರೆ. ಈ ಮೂಲಕ ಭಾರತದಾದ್ಯಂತ ಹೊಸ ಮತ್ತು ಹಳೆಯ ಅಭಿಮಾನಿಗಳಿಗೆ ಹೊಚ್ಚ ಹೊಸ ಸಂಗೀತವನ್ನು ತರುತ್ತಿದ್ದಾರೆ.

Leave a Comment