ಎಸ್.ಯು.ಸಿ.ಐ ಪಕ್ಷದ ಮೂರನೇ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ

ಬಳ್ಳಾರಿ, ಆ.4: ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಮೂರನೇ ಜಿಲ್ಲಾ ಸಮ್ಮೇಳನ ಆರಂಭಗೊಂಡಿತು.

ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ನ ರಾಜ್ಯ ಸಮಿತಿ ಸದಸ್ಯೆ ಉಮಾ ಕೆ ಸಮ್ಮೇಳನವನ್ನು ಉದ್ದೇಶಿಸಿ, ದೇಶದೆಲ್ಲೆಡೆ ಭ್ರಷ್ಟಾಚಾರ, ದಲಿತರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿದ್ದು ಕಾರಣ ಪ್ರಜ್ಞಾವಂತ ನಾಗರೀಕರು, ಸುಶಿಕ್ಷಿತರು ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ಚಿಂತಿಸುವ ಅವಶ್ಯಕತೆಯಿದೆ ಎಂದರು.

ನವೆಂಬರ್ ತಿಂಗಳಲ್ಲಿ ನಡೆಯುವ ಮಹಾ ಅಧಿವೇಶನದ ಅಂಗವಾಗಿ ಹಮ್ಮಿಕೊಂಡಿದ್ದ ಈ ಸಮ್ಮೇಳನ ಉದ್ಘಾಟನೆ ಮುನ್ನ ಕಾರ್ಮಿಕ ವರ್ಗದ ನಾಯಕರಾದ ಶಿವದಾಸ್ ಘೋಷ್, ಕಾರ್ಲ್ ಮಾರ್ಕ್ಸ್, ಸ್ಟಾಲಿನ್, ಲೆನಿನ್ ಮೊದಲಾದ ಚಿಂತಕರ ಭಾವಚಿತ್ರಗಳನ್ನು ಹಿಡಿದು ಗಾಂಧಿಭವನದಿಂದ ನೂರಾರು ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಮೆರವಣಿಗೆಯಲ್ಲಿ ಪಕ್ಷದ ಮುಖಂಡರುಗಳಾದ ಕೆ.ಸೋಮಶೇಖರ್, ಡಾ.ಪ್ರಮೋದ್, ರಾಧಾಕೃಷ್ಣ ಉಪಾಧ್ಯ, ಮಂಜುಳ, ಸುರೇಶ್, ನಾಗಲಕ್ಷ್ಮಿ, ಶಾಂತ, ಈಶ್ವರಿ ಮೊದಲಾದವರು ಪಾಲ್ಗೊಂಡಿದ್ದರು.

Leave a Comment