ಎಸ್.ಪಿ.ಜಿ.ಗೆ ಧನ್ಯವಾದ ಅರ್ಪಿಸಿದ ಸೋನಿಯಾ

ನವದೆಹಲಿ, ನ. ೧೦- ತಮ್ಮ ಕುಟುಂಬಕ್ಕೆ ಇದುವರೆವಿಗೆ ನೀಡಿದ ಭದ್ರತೆಗಾಗಿ ಎಸ್.ಪಿ.ಜಿ. ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಧನ್ಯವಾದ ತಿಳಿಸಿದ್ದಾರೆ.
ಗಾಂಧಿ ಕುಟುಂಬಕ್ಕೆ ಇದೂವರೆವಿಗೂ ನೀಡಿದ ಎಸ್.ಪಿ.ಜಿ. ಭದ್ರತೆಯನ್ನು ಕೇಂದ್ರ ಸರ್ಕಾರ ಶುಕ್ರವಾರ ಹಿಂಪಡೆದ ನಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದೂವರೆವಿಗೆ ತಮ್ಮ ಕುಟುಂಬಕ್ಕೆ ಭದ್ರತೆ ನೀಡಿದ ಎಸ್.ಪಿ.ಜಿ. ಗೆ ಧನ್ಯವಾದ ತಿಳಿಸಿ ಪತ್ರ ಬರೆದಿದ್ದಾರೆ.
ಶನಿವಾರ ಎಸ್.ಪಿ.ಜಿ. ಮುಖ್ಯಸ್ಥ ಅರುಣ್ ಸಿನ್ಹಾ ಅವರಿಗೆ ಧನ್ಯವಾದ ಸಲ್ಲಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪತ್ರ ಬರೆದಿದ್ದಾರೆ.
“ಇದೂವರೆವಿಗೆ ನಿಮ್ಮ ರಕ್ಷಣೆಯಲ್ಲಿ ಇದ್ದಷ್ಟು ಕಾಲ ಅತ್ಯಂತ ಸುರಕ್ಷಿತ ಭಾವ ಅನುಭವಿಸುದ್ದೇವೆ. ಅಂತಹದೊಂದು ವಿಶ್ವಾಸ ಮೂಡಿಸಿದ ನಿಮ್ಮ ಸೇವೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Leave a Comment