ಎಸ್.ಜಿ.ಕಾಲೇಜು ಸಿಬ್ಬಂದಿ ಗಾದಿಲಿಂಗಪ್ಪ ನಿವೃತ್ತಿ: ಆತ್ಮೀಯ ಬೀಲ್ಕೊಡುಗೆ

ಬಳ್ಲಾರಿ ಜೂ 30 : ನಗರದ ವೀರಶೈವ ವಿದ್ಯಾವರ್ಧಕ ಸಂಘದ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ (ಎಸ್.ಜಿ) ಕಾಲೇಜಿನಲ್ಲಿ ಜೆ. ಗಾದಿಲಿಂಗಪ್ಪ ಅವರು ಡಿ-ದರ್ಜೆ ನೌಕರರಾಗಿದ್ದರು. ಅವರು ಇಂದು ವಯೋ ನಿವೃತ್ತಿಗೊಂಡರು ಅವರಿಗೆ ಕಾಲಿಜಿನ ಸಿಬ್ಬಂದಿಯಿಂದ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಕಾಲೇಜಿನಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ರಾಮನಗೌಡ ಅವರು ವಹಿಸಿದ್ದರು. ಗಾದಿಲಿಂಗಪ್ಪ ಇವರ ಸೇವೆಯನ್ನು ಎಲ್ಲರೂ ಸ್ಮರಿಸಿದರು ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಗಾದಿಲಿಂಗಪ್ಪ ದಂಪತಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಉಪ ಪ್ರಾಚಾರ್ಯ ಎಸ್. ಕೊಟ್ರೇಶ್, ದೈಹಿಕ ಶಿಕ್ಷಕ ಕೆ. ಎನ್. ಬಸವಲಿಂಗಪ್ಪ ಅವರು ಗಾದಿಲಿಂಗಪ್ಪ ಅವರ ಪರಿಚಯವನ್ನು ಮಾಡಿಕೊಟ್ಟರು. ಕೆ. ಎಂ. ಸಿದ್ಧಲಿಂಗಯ್ಯ, ನಿವೃತ್ತ ದೈಹಿಕ ಶಿಕ್ಷಕರು, ಬಿ. ಪಂಚಾಕ್ಷರಪ್ಪ, ಉಪನ್ಯಾಸಕರು, ಕೆ. ಎಂ. ಮಂಜುನಾಥ, ಉಪನ್ಯಾಸಕರು ಮತ್ತು ಎಂ. ರಾಯಚೋಟಿ ಸ್ವಾಮಿ, ದ್ವಿತೀಯ ದರ್ಜೆ ಸಹಾಯಕರು ಇವರು ಗಾದಿಲಿಂಗಪ್ಪ ಅವರೊಂದಿಗಿನ ಒಡನಾಟ, ಬಾಂಧವ್ಯದ ಕುರಿತು ನೆನಪುಗಳನ್ನು ಹಂಚಿಕೊಂಡರು. ಗಾದಿಲಿಂಗಪ್ಪ ಅವರು 41 ವರ್ಷಗಳ ಸೇವಾನುಭವನ್ನು ಹಾಗೂ ತಮ್ಮ ಸೇವಾವಧಿಯಲ್ಲಿ ತಮಗೆ ಸಹಾಯ ಮಾಡಿದ ಎಲ್ಲಾ ಸದಸ್ಯರುಗಳನ್ನು ಪ್ರಾಚಾರ್ಯರನ್ನು ಸ್ಮರಿಸಿದರು. ತಮಗೆ ನಿವೃತ್ತಿಹೊಂದುವ ಮುನ್ನವೇ ಪಿಂಚಣಿ ಮಂಜೂರಾಗಿದ್ದ ಖುಷಿಯನ್ನು ಎಲ್ಲರೊಂದಿಗೆ ಹಂಚಿಕೊಂಡರು. ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಜಾನೇಕುಂಟೆ ಸಣ್ಣಬಸವರಾಜ, ಎರ್ರೆಣ್ಣ ಇವರು ಪಾಲ್ಗೊಂಡಿದ್ದರು. ಶಿಕ್ಷಕಿ ಹೆಚ್. ನಾಗರತ್ನ ಪಾಟೀಲ್ ಪ್ರಾರ್ಥನೆ ಮಾಡಿದರು. ಪ್ರಾಸ್ತಾವಿಕ ನುಡಿಗಳನ್ನು ಹಾಗೂ ಸ್ವಾಗತವನ್ನು ಕಾಲೇಜನ ಪ್ರಾಚಾರ್ಯ ಶಿಟಿ. ಎಂ. ಲಿಂಗರಾಜ್ ನರೆವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಎಸ್. ನಾಗರಾಜ ನಿರ್ವಹಿಸಿದರು ಹಾಗೂ ಉಪನ್ಯಾಸಕ ಸಂತೋಷ್ ಶಂ. ಯಕ್ಕುಂಡಿ ವಂದಿಸಿದರು.

Share

Leave a Comment