ಎಸ್‍ಪಿಎಸ್ ನಗರದ ರಾಜಾಕಾಲುವೆ ವೀಕ್ಷಣೆ

ದಾವಣಗೆರೆ.ಆ.15; ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ 2 ಮತ್ತು 8ನೇ ವಾರ್ಡಿನ ಎಸ್‍ಪಿಎಸ್ ನಗರದಲ್ಲಿ ಹಾದು ಹೋಗಿರುವ ರಾಜಾಕಾಲುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜಾಕಾಲುವೆ ಕಳಪೆ ಆಗಿರುವ ಬಗ್ಗೆ ಸ್ಥಳೀಯ ನಾಗರೀಕರು ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿದ ಶಾಸಕರು ರಾಜಾಕಾಲುವೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ರಾಜಾಕಾಲುವೆ ನಿರ್ಮಾಣದಲ್ಲಿ ಕಳಪೆ ಆಗಿಲ್ಲ. ಸಮರ್ಪಕ ರೀತಿಯಲ್ಲಿ ಕಾಮಗಾರಿ ಕೈಗೊಳ್ಳದಿರುವುದರಿಂದ ನಾಗರೀಕರಿಗೆ ತಪ್ಪು ಮಾಹಿತಿ ಬಂದಿದ್ದು, ನಮ್ಮ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ನಾಗರೀಕರಿಗೆ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ದಿನೇಶ್.ಕೆ.ಶೆಟ್ಟಿ, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಸ್ಮಾರ್ಟ್‍ಸಿಟಿಯ ಕಾರ್ಯಪಾಲಕ ಅಭಿಯಂತರರಾದ ಗುರುಪಾದಪ್ಪ ಮತ್ತಿತರರಿದ್ದರು.

Leave a Comment