ಎಸ್‍ಪಿಎಸ್ ನಗರದಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗುದು

ದಾವಣಗೆರೆ,ನ,5 : ಎಸ್‍ಪಿಎಸ್ ನಗರದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾ ಸಚಿವರು ಮತ್ತು ಶಾಸಕರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ತಿಳಿಸಿದರು. ಎಸ್‍ಪಿಎಸ್ ನಗರ ನಾಗರೀಕ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚಿಗೆ ಬಾರಿ ಮಳೆಯಿಂದಾಗಿ ಈ ಭಾಗದಲ್ಲಿ ಅನಾಹುತು ಉಂಟಾಯಿತು. ರಾತ್ರಿ ವೇಳೆಯಲ್ಲಿ ನಾನು ಭೇಟಿ ನೀಡಿದ್ದು, ಅದು ನನ್ನ ಕರ್ತವ್ಯ ಹಾಗೂ ನನ್ನ ಜವಾಬ್ದಾರಿ ಸಹ ಆಗಿದೆ. ಇಲ್ಲಿ ಮೂಲಸೌಲಭ್ಯಗಳ ಕೊರತೆಗಳಾದ ರಸ್ತೆ, ಚರಂಡಿ, ದೀಪ ಗಮನಹರಿಸುವುದಾಗಿ ಭರವಸೆ ನೀಡಿದರು.
ನಾಗರೀಕ ಸಮಿತಿ ಉದ್ಘಾಟಿಸಿ ಮಾತನಾಡಿದ ಸಿಂಡಿಕೇಟ್ ಸದಸ್ಯ ಹೆಚ್.ವಿಶ್ವನಾಥ, ಅತಿ ಹಿಂದುಳಿದ ಪ್ರದೇಶವಾದ ಎಸ್‍ಪಿಎಸ್ ನಗರದ ನಾಗರೀಕ ಸಮಿತಿಯಿಂದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರಿಗೆ ಸನ್ಮಾನ ಮಾಡಿರುವುದು ಒಳ್ಳೇಯ ಬೆಳವಣೆಗೆಯಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದ ಅವರು, ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರಾಗಿ ಮಾಡದೆ ಐಎಎಸ್, ಐಪಿಎಸ್ ಓದಿಸುವ ಮೂಲಕ ಉನ್ನತ ಮಟ್ಟಕ್ಕೆ ಕೊಂಡಯ್ಯಬೇಕು ಎಂದು ಕಿವಿಮಾತು ಹೇಳಿದರು. ಈ ವೇಳೆ ಅಧ್ಯಕ್ಷರಾದ ಹೆಚ್.ಸಿ.ಮಲ್ಲಪ್ಪ, ಸೇವಾಲಾಲ್ ಸಮಾಜ ಮುಖಂಡ ಕುಮಾರ್, ಸಮಿತಿಯ ಕಾರ್ಯದರ್ಶಿ ಪ್ರಕಾಶ್, ಜೆಡಿಎಸ್ ಮುಖಂಡ ಹೆಚ್.ಸಿ.ಗುಡ್ಡಪ್ಪ, ಬಿ.ಪ್ರಕಾಶ್, ಮಾಲತೇಶ್, ಎಂ.ಆಂಜನೇಯ ಸೇರಿದಂತೆ ಇತರರು ಇದ್ದರು.

 

Leave a Comment