ಎಸ್‌ಸಿಪಿ, ಪಿಎಸ್‌ಪಿ ಯೋಜನೆ ದುರ್ಬಳಕೆ

ರಾಯಚೂರು.ಮಾ.14- ಮಾನ್ವಿ ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನಂ. 4 ಕಾಲುವೆ ಉಪವಿಭಾಗದ ಹಿರೇ ಕೋಟ್ನೇಕಲ್ ಇಲಾಖೆ ವತಿಯಿಂದ ಎಸ್.ಸಿ.ಪಿ, ಪಿ.ಎಸ್.ಪಿ.ಅನುದಾನದಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಸಮುದಾಯ ಭವನಗಳ ಅನುದಾನ ದುರ್ಬಳಕೆ ಮಾಡಿರುವ ಎಇಇ ಲೋಕೇಶ ಹಾಗೂ ಇಇ ರಾಯಪ್ಪ ಬೇನಾಮಿ ಆಸ್ತಿ ತನಿಖೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಂ. 4 ಕಾಲುವೆ ಉಪ ವಿಭಾಗ ಹಿರೇಕೋಟ್ನೇಕಲ್ ಇಲಾಖೆಗೆ ಎಸ್.ಸಿ.ಪಿ, ಪಿ.ಎಸ್.ಪಿ.2017-18 ನೇ ಯೋಜನೆಯಡಿಯಲ್ಲಿ ಕೋಟ್ಯಾಂತರ ರೂ.ಅನುದಾನ ಮಂಜೂರಾಗಿದ್ದು ಸದರಿ ಅನುದಾನದಡಿಯಲ್ಲಿ ಎಸ್‌ಸಿ., ಎಸ್.ಟಿ.ಜನಾಂಗದ ಜನರು ವಾಸಿಸುವ ಪ್ರದೇಶಗಳಲ್ಲಿ ಸಮುದಾಯ ಭವನ, ಸಿಸಿ ರಸ್ತೆ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಸದರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿಗಳು ಅಂದಾಜು ಪ್ರಕಾರವಾಗಿರದೇ ಕಳಪೆಯಿಂದ ಕೂಡಿದ್ದವುಗಳಾಗಿದ್ದು ಅರೆ-ಬರೆ ಕೆಲಸ ಮಾಡಿ ಸಂಪೂರ್ಣ ಬಿಲ್ ಎತ್ತುವಳಿ ಮಾಡುತ್ತಿದ್ದು ಅನುದಾನವನ್ನು ದುರ್ಬಳಕೆ ಮಾಡಲಾಗುತ್ತದೆಂದು ದಲಿತ ಸಂಘರ್ಷ ಸಮಿತಿಯು ಕಾಮಗಾರಿಗಳ ತನಿಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸದಾನಂದ ಪನ್ನೂರು, ಡ್ಯಾನಿಯಲ್ ಕೊಲ್ಮಿ, ಅಬ್ರಾಹಂ ಪನ್ನೂರು, ಕೆ.ಎಂ.ಲಾರೆನ್ಸ್, ರವಿಕುಮಾರ ಮದ್ಲಾಪೂರು, ಫಕೀರಪ್ಪ ಕಡದಿನ್ನಿ, ಪೆದ್ದಪ್ಪ ಇನ್ನಿತರರು ಉಪಸ್ಥಿತರಿದ್ದರು.

Leave a Comment