ಎಸ್‌ಪಿಜಿ ಸಲಹೆ ಉಲ್ಲಂಘನೆ ರಾಹುಲ್ ಭದ್ರತೆ ವಾಪಸ್ಸು

ನವದೆಹಲಿ, ನ. ೯- ಎಸ್‌ಪಿಜಿ ಭದ್ರತಾ ಸಲಹೆಗಳನ್ನು ಸಾಕಷ್ಟು ಬಾರಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಗಾಂಧಿ ಕುಟುಂಬದ ಮೂವರಿಗೆ ನೀಡಿದ್ದ ಎಸ್‌‌ಪಿಜಿ ಭದ್ರತೆ ಹಿಂಪಡೆದಿರುವುದಾಗಿ ಸರ್ಕಾರ ಸ್ಪಷ್ಟಪಡಿಸಿದೆ.
2015 ರಿಂದ ಎಸ್‌‌ಪಿಜಿ ಸೂಚಿಸಿರುವ ಗುಂಡು ನಿರೋಧಕ ವಾಹನದಲ್ಲಿ ತೆರಳಲು ನಿರಾಕರಿಸುವ ಮೂಲಕ 1832 ಬಾರಿ ನಿಯಮ ಉಲ್ಲಂಘಿಸಿದ್ದಾರೆ. 2005 ರಿಂದ 2014ರ ನಡುವೆ ದೆಹಲಿಯಿಂದ ಹೊರ ಪ್ರವೇಶಿಸುವಾಗ 247 ಬಾರಿ ಗುಂಡು ನಿರೋಧಕ ವಾಹನವನ್ನು ಬಳಕೆ ಮಾಡಿದ್ದಾರೆ.
ರಾಹುಲ್‌ಗಾಂಧಿ ಅನೇಕ ಬಾರಿ ಭಾರಿ ವಾಹನದ ಮೇಲೆ ಕುಳಿತು ಸಂಚಾರ ಮಾಡಿ ಮೋಟಾರ್ ವಾಹನ ಕಾಯ್ದೆ ಉಲ್ಲಂಘಿಸಿದ್ದಾರೆ ಎನ್ನುವ ಕಾರಣ ಮುಂದಿಟ್ಟುಕೊಂಡು ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿದೆ.
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು 1984ರಲ್ಲಿ ಅಂಗರಕ್ಷಕರಿಂದಲೇ ಹತ್ಯೆಯಾದ ಬಳಿಕ ಪ್ರಧಾನಿಗಳ ರಕ್ಷಣೆಗೆ 1995 ರಿಂದ ಎಸ್‌ಪಿಜಿ ಭದ್ರತಾ ಕಾಯ್ದೆ ಜಾರಿಗೆ ತರಲಾಗಿತ್ತು. ರಾಜೀವ್ ಗಾಂಧಿ ಅವರ ಹತ್ಯೆಯ 1991ರಲ್ಲಿ ಅವರ ಕುಟುಂಬದವರಿಗೆ ವಿಸ್ತರಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು.
2017ರ ಆ. 4 ರಂದು ಎಸ್‌ಪಿಜಿ ಸೂಚನೆ ಧಿಕ್ಕರಿಸಿ ಗುಂಡು ನಿರೋಧಕ ಕಾರನ್ನು ಬಿಟ್ಟು ಇತರೆ ವಾಹನದಲ್ಲಿ ಸಂಚರಿಸಿದ್ದರು. ಅಂದು ರಾಹುಲ್‌ಗಾಂಧಿ ಅವರ ಮೇಲೆ ಕಲ್ಲು ತೂರಾಟ ನಡೆದಿದ್ದು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.
ರಾಹುಲ್‌ಗಾಂಧಿ ಕಾರನ್ನು ನಿರಾಕರಿಸಿದ್ದೇ ಈ ಘಟನೆಗೆ ಕಾರಣ ಎಂದು ಕಾಂಗ್ರೆಸ್ಸಿನವರೇ ಪ್ರಶ್ನಿಸಿದ್ದರು.
ಉಳಿದಂತೆ ರಾಹುಲ್‌ಗಾಂಧಿಯವರು 121 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದರು. ಅದರಲ್ಲಿ 100 ಬಾರಿ ಎಸ್‌ಪಿಜಿ ಅಧಿಕಾರಿ ಇಲ್ಲದೆ ಒಬ್ಬರೇ ತೆರಳಿದ್ದರು. ಇವರೊಂದಿಗೆ ಸೋನಿಯಾಗಾಂಧಿ, ಪ್ರಿಯಾಂಕಗಾಂಧಿ, ಪ್ರಿಯಾಂಕಗಾಂಧಿ ವಾರ್ದಾ ಅವರಿಂದಲೂ ಎಸ್‌ಪಿಜಿ ನಿಯಮ ಉಲ್ಲಂಘಿಸಿದ್ದರು ಹಾಗೂ ಕೆಲ ಸಂದರ್ಭದಲ್ಲಿ ಭದ್ರತೆಯನ್ನೂ ನಿರಾಕರಿಸಿದ್ದರು. ಈ ಎಲ್ಲ ಕಾರಣಗಳನ್ನಾಧರಿಸಿ ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿದೆ.

Leave a Comment