: ಎಸ್‌ಐ ಹುದ್ದೆ ನೇಮಕಾತಿ-‘ಮೌಖಿಕ ಪರೀಕ್ಷೆ’ ಇಲ್ಲ

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನದಂತೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೃಂದದ ಹುದ್ದೆಗಳ ನೇಮಕಾತಿಗೆ ಇದುವರೆಗೆ ಇದ್ದಂತ ಮೌಖಿಕ ಪರೀಕ್ಷೆಯನ್ನು ಇದೀಗ ಕೈ ಬಿಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ಮೂಲಕ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಈ ಹಿಂದೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಜೊತೆಗೆ 10 ಅಂಕಗಳಿಗೆ ಮೌಖಿಕ ಪರೀಕ್ಷೆಯನ್ನು ನಿಗಧಿ ಪಡಿಸಲಾಗಿತ್ತು. ಆದ್ರೇ, ಇಂತಹ ನಿಯಮವನ್ನು ಇದೀಗ ಪೊಲೀಸ್ ಇಲಾಖೆ ಇತಿಶ್ರೀ ಹಾಡಿದೆ. ಗ್ರೂಪ್ ಸಿ ನಾಗರೀಕ ಸೇವಾ ಹುದ್ದೆಗಳಿಗೆ ಮೌಖಿಕ ಪರೀಕ್ಷೆ ನಡೆಸಬಾರದೆಂಬ ತಿದ್ದುಪಡಿ ನಿಯಮ ಜಾರಿಗೆ ಬಂದಿದ್ದು, ಇನ್ಮುಂದೆ ಎಸ್ ಐ ನೇಮಕಾತಿಯಲ್ಲಿ ಮೌಖಿಕ ಪರೀಕ್ಷೆ ಇರುವುದಿಲ್ಲ.
ಅಂದಹಾಗೇ ಈಗಾಗಲೇ ಕರೆಯಲಾಗಿರುವ ಪ1ಲೀಸ್ ಸಬ್ ಇನ್ಸ್ ಪೆಕ್ಟರ್ ( ಸಿವಿಲ್) (ಪುರುಷ ಮತ್ತು ಮಹಿಳೆ), ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ( ಸಿಎಆರ್, ಡಿಎಆರ್) ಪುರುಷ 40 ಹುದ್ದೆಗಳು, ವಿಶೇಷ ಮೀಸಲು ಸಬ್ ಇನ್ಸ್ ಪೆಕ್ಟರ್ ಕೆ ಎಸ್ ಆರ್ ಪಿ ಪುರುಷ 40 ಹುದ್ದೆಗಳಿಗೂ ಮೌಖಿಕ ಪರೀಕ್ಷೆ ನಡೆಸದಿರಲು ಸರ್ಕಾರ ನಿರ್ದೇಶನ ನೀಡಿದ್ದು, ಇದರಂತೆ ಮೌಖಿಕ ಪರೀಕ್ಷೆ ನಡೆಸುವುದಿಲ್ಲ ಎಂದು ಪ್ರಕರಣೆ ಹೊರಡಿಸಿ ತಿಳಿಸಿದೆ.

Leave a Comment