ಎಸ್‌ಆರ್‌ಕೆ ಶುರು

ಡಾ.ರಾಜ್‌ಕುಮಾರ್ ಕುಟುಂಬದ ಲಕ್ಕಿ ಗೋಪಾಲ್ ನಿರ್ದೇಶಿಸುತ್ತಿರುವ ಎಸ್‌ಆರ್‌ಕೆ ಸಿನೆಮಾದ ಚಿತ್ರೀಕರಣ ಆರಂಭಗೊಂಡಿದೆ.ಕಳೆದ ಬುಧವಾರ ಮಂತ್ರಿಮಾಲ್‌ನಲ್ಲಿ ಬೃಹತ್ ಜನಸ್ತೋಮದ ನಡುವೆ ನಡೆದ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಾಯಕರಾಗಿರುವ “ಎಸ್‌ಆರ್‌ಕೆ’ ಚಿತ್ರದ ಶೀರ್ಷಿಕೆ ಬಿಡುಗಡೆಯ ನಂತರ ಚಿತ್ರೀಕರಣ ಶುರುವಾಗಿದೆ.

ಎಸ್‌ಆರ್‌ಕೆ’ ಎಂದರೆ ಶಿವರಾಜಕುಮಾರ್ ಎಂದು ಹೊಸದಾಗಿ ಹೇಳಬೇಕಿಲ್ಲ. ಈ ಚಿತ್ರದಲ್ಲೂ ನಿರ್ದೇಶಕ ಲಕ್ಕಿ ಶಿವಣ್ಣ ಅವರನ್ನು ಹೊಸ ರೀತಿಯಲ್ಲಿ ತೋರಿಸುವುದಾಗಿ ಹೇಳುತ್ತಾರೆ ನೂರು ಚಿತ್ರಗಳಲ್ಲಿ ಶಿವಣ್ಣ ಇಲ್ಲಿಯವೆರೆ ಮಾಡಿರದ ಪಾತ್ರವನ್ನು ಮಾಡಲಿದ್ದು ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಅಚ್ಚರಿ ನೀಡಲಿದ್ದಾರೆ ಎನ್ನುವ ಲಕ್ಕಿ ಗೋಪಾಲ್ ಡಾ.ರಾಜ್‌ಕುಮಾರ್ ಸಹೋದರಿ ನಾಗಮ್ಮ ಅವರ ಮೊಮ್ಮಗ.

ನಾಗಮ್ಮ ಅವರ ಪುತ್ರ ಗೋಪಾಲ್ ಈಗ ಗಾಜನೂರಿನಲ್ಲಿ ವಾಸವಿದ್ದಾರೆ.ಅವರ ಪುತ್ರರಾಗಿರುವ ಲಕ್ಕಿ ಗೋಪಾಲ್ ದೊಡ್ಮನೆ ಹುಡ್ಗ ಸೇರಿ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವಗಳಿಸಿದ್ದಾರೆ ಅವರ ಸಂಬಂಧಿಯಾಗಿರುವ  ಶಿವರಾಜಕುಮಾರ್ ಸಿನಿಮಾ ಮಾಡುತ್ತಿರುವುದು ಲಕ್ಕಿಗೆ ಎಲ್ಲಿಲ್ಲದ ಸಂತಸ ತಂದಿದೆ.

ಶೀರ್ಷಿಕೆ ಅನಾವರಣದ ನಂತರ ಮಾತನಾಡಿದ ಅವರು  ಸಿದ್ಧಾರ್ಥ ಚಿತ್ರೀಕರಣ ಸಂದರ್ಭದಲ್ಲಿ ಚಿತ್ರ ಕತೆ ಬರವಣಿಗೆ ಶುರುಮಾಡಿದ್ದೆ. ಮುಂದೆ ಅದನ್ನು ಒಂದೊಳ್ಳೆಯ ಕಥೆಯನ್ನಾಗಿ ರೂಪಿಸಿದೆ. “ದೊಡ್ಮನೆ ಹುಡುಗ’ ಚಿತ್ರದ ವೇಳೆ ಶಿವಣ್ಣ ಅವರಿಗೆ ಕಥೆಯ ತಿರುಳೂ ಹೇಳಿದ್ದೆ. ಅದು ಅವರಿಗೆ ಇಷ್ಟ ಆಗಿತ್ತು. ಸ್ಕ್ರೀನ್‌ಪ್ಲೇ ಸ್ಟ್ರಾಂಗ್ ಮಾಡಿಕೋ, ಮಾಡೋಣ ಅಂದಿದ್ದರು. ನನ್ನ ಟೀಮ್ ಜೊತೆ ಕುಳಿತು ಕಥೆಯನ್ನು ಗಟ್ಟಿ ಮಾಡಿಕೊಂಡೆ. ಎಲ್ಲವೂ ಮುಗಿದ ಬಳಿಕ ಒಂದು ದಿನ ಪುನಃ ಶಿವಣ್ಣ ಅವರಿಗೆ ಸ್ಕ್ರೀನ್‌ಪ್ಲೇ ಸಮೇತ ಕಥೆ ಹೇಳಿದೆ. ಅವರಿಗೆ ಖುಷಿಯಾಯ್ತು. ಅಲ್ಲಿಂದ ಎಸ್‌ಆರ್‌ಕೆ’ ಆರಂಭವಾಯಿತು ಎನ್ನುತ್ತಾರೆ ಲಕ್ಕಿ.

ಕಳೆದ ಏಳು ತಿಂಗಳ ಹಿಂದೆಯೇ ಈ ಕಥೆಗೆ ಶಿವಣ್ಣ ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಇನ್ನು, ಈ ಚಿತ್ರಕ್ಕೆ ಕಿರಣ್ ಕುಮಾರ್ ಎನ್ನುವವರು ನಿರ್ಮಾಪಕರು. ಅವರಿಗೆ ಇದು ಮೊದಲ ಚಿತ್ರ. ಉಳಿದಂತೆ ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣ ಮಾಡಿದರೆ, ಅಜನೀಶ್ ಲೋಕನಾಥ್ ನಾಲ್ಕು ಗೀತೆಗಳಿಗೆ ಸಂಗೀತ ನೀಡುತ್ತಿದ್ದಾರೆ. ದೀಪು ಎಸ್.ಕುಮಾರ್ ಸಂಕಲನ ಮಾಡಲಿದ್ದಾರೆ.

“ಭರ್ಜರಿ’ ಚೇತನ್ ಕುಮಾರ್ ಸಾಹಿತ್ಯ, ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯಕ್ಕೆ ಹೀರೋ ಹಾಗು ತಂತ್ರಜ್ಞರ ಆಯ್ಕೆಯಾಗಿದೆ. ಉಳಿದಂತೆ ನಾಯಕಿ ಮತ್ತು ಕಲಾವಿದರ ಆಯ್ಕೆ ಆಗಬೇಕಿದೆ’ ಎಂದು ವಿವರ ಕೊಡುತ್ತಾರೆ ಲಕ್ಕಿ ಗೋಪಾಲ್.  “ಎಸ್‌ಆರ್‌ಕೆ’ ಚಿತ್ರೀಕರಣ ಬೆಳಗಾವಿ, ಮೈಸೂರು ಇತರೆ ಕಡೆ ಚಿತ್ರೀಕರಿಸುವ ಯೋಚನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಡಾ.ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ, ಶಿವರಾಜಕುಮಾರ್, ಗೀತಾ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ವಿನಯ್ ರಾಜಕುಮಾರ್ ಸೇರಿದಂತೆ ರಾಜ್‌ಕುಟುಂಬದ ಬಹುತೇಕ ಮಂದಿ “ಎಸ್‌ಆರ್‌ಕೆ’ ಟೈಟಲ್ ಲಾಂಚ್‌ಗೆ ಸಾಕ್ಷಿಯಾದರು. ಇನ್ನು, ನಿರ್ದೇಶಕರಾದ ಚೇತನ್ ಕುಮಾರ್, ಸಂತೋಷ್ ಆನಂದರಾಮ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಕೂಡಾ, ನಿರ್ದೇಶಕ ಲಕ್ಕಿ ಅವರ ಹೊಸ ಜರ್ನಿಗೆ ಶುಭ ಕೋರುವ ಮೂಲಕ “ಎಸ್‌ಆರ್‌ಕೆ’ ಟೈಟಲ್‌ಗೆ ಮೆಚ್ಚುಗೆ ಸೂಚಿಸಿದರು.

Leave a Comment