ಎಸಿಆರ್ ಮಾಸ್ಟರ್ ಪ್ರಶಸ್ತಿಗೆ ಡಾ.ಮಹೇಂದ್ರನಾಥ್ ಆಯ್ಕೆ

ಬೆಂಗಳೂರು, ಸೆ ೧೨- ನಗರದ ರುಮಟಾಲಜಿ ತಜ್ಷರಾದ ಡಾ.ಕೆ.ಎಂ. ಮಹೇಂದ್ರನಾಥ್ ಅವರ ಸಂಧಿವಾತ ಆರೋಗ್ಯದ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಅಮೇರಿಕನ್ ಕಾಲೇಜ್ ಆಫ್ ರುಮಟಾಲಜಿ ವತಿಯಿಂದ ನೀಡುವ ಅತ್ಯುನ್ನತ ಎಸಿಆರ್ ಮಾಸ್ಟರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದೇ ವರ್ಷ ಅ ೨೦ರಂದು ಅಮೆರಿಕಾದ ಚಿಕಾಗೋ ನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಹೇಂದ್ರನಾಥ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಡಾ,ಮಹೇಂದ್ರನಾಥ್ ಅವರು ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘದ ಸಂಸ್ಥಾಪಕರಾಗಿ ಮತ್ತು ಐಆರ್‌ಎ ಮಾಜಿ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರು ಈಗಾಗಲೇ ಐಆರ್‌ಎ ವತಿಯಿಂದ ವಿಶಿಷ್ಠ ಸೇವಾ ಪ್ರಶಸ್ತಿ ಹಾಗೂ ಬ್ರಿಟಿಷ್ ಸೊಸೈಟಿ ಆಫ್ ರುಮಟಾಲಜಿ ವತಿಯಿಂಸ ಬಿಎಸ್‌ಆರ್ ಫೆಲೀಷಿಪ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Leave a Comment