ಎವೆರೆಸ್ಟ್ ಶಿಖರ ಏರಿದ ವಿದ್ಯಾರ್ಥಿಗಳು

 

ಒಂದು ವಾರ ನಿಷ್ಕಳಂಕವಾದ ಮತ್ತು ಬೃಹದಾಕಾರದ ಹಿಮಾಲಯಗಳ ಹಳ್ಳಿಗಳು, ನದಿಗಳು, ಪರ್ವತಗಳ ಸಾಲುಗಳು, ಜನರು, ಕಾಡುಮೇಡು, ಮಂಜು, ಕಲ್ಲುಗುಡ್ಡ, ಮೋಡಗಳನ್ನು ದಾಟಿದ ನಂತರ ಸಿಲಿಕಾನ್ ಸಿಟಿಯ ಇಂಡಸ್ ಅಂತರಾಷ್ಟ್ರೀಯ ಶಾಲೆಯ ೩ ಬಾಲಕಿಯರು ಮತ್ತು ೫ ಬಾಲಕರ ತಂಡವು ಎವೆರೆಸ್ಟ್ ಶಿಖರ ಏರುವ ಮೂಲಕ ಗಮನ ಸೆಳೆದಿದ್ದಾರೆ

ನಾವು ಜಯಿಸಿದ್ದು ಪರ್ವತವನ್ನಲ್ಲ ಆದರೆ ನಮ್ಮನ್ನೇ ಎಂದರು ಸರ್ ಏದ್ಮಂಡ್ ಹಿಲರಿ, ವಿಶ್ವದ ಅತಿ ಎತ್ತರದ ಪರ್ವತದ ತುತ್ತತುದಿಯನ್ನು ತಲುಪಿದ ಮೊದಲ ಮಾನವ. ಇದೇ ಮಾತು ಇಂಡಸ್ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳನ್ನು ಪ್ರೇರೆಪಿಸಿ ಎವೆರೆಸ್ಟ್ ಶಿಖರ ಏರಿ ಬೇಸ್ ಕ್ಯಾಂಪ್‌ನಲ್ಲಿ ಕಾಲಿಡುವಂತೆ ಮಾಡಿತ್ತು ಎಂದರೆ ತಪ್ಪಗಲಾರದು.

indus-school-everest-base-camp-1-1

ಆರೋಣದ ನಾಯಕ ಮಿತೇಶ್ ಸಿಂಘ್‌ನೊಂದಿಗೆ ಇಂಡಸ್ ಶಾಲೆಯ ೧೧ನೇ ತರಗತಿಯ ೮ ವಿದ್ಯಾರ್ಥಿಗಳಾದ ಸಿದ್ಧಾರ್ಥ ಕೃಷ್ಣ ರಾವ್, ಭವ್ಯ ಭೂಪೇಂದ್ರ ವೆಕಾರಿಯಾ, ಜುಜಾನ್ನಾ ಲಾಜ್ಲೋ, ವೆರೊನಿಕಾ ಲಾಜ಼್ಲೊ, ಆದಿ ರಾಘವ ನಾರಾಯಣ್, ಸಿದ್ಧಾರ್ಥ ನೀಹಲ್ ಥೈವಲಪ್, ವೇದಿಕ್ ವೀರಮಣಿ, ಶ್ರೇಯಸ್ ರಾವ್ ಯಚಮನೇನಿ, ಮಿತೇಶ್ ಸಿಂಘ್ ಆರೋಹಣ ತಂಡವು ೧೧೦ ಕಿಮೀಗಳನ್ನು ಏಳು ದಿನಗಳವರೆಗೆ ನಡೆದು ಆರೋಹಣವನ್ನು ಮುಗಿಸಿದರು, ಪ್ರತಿಕೂಲ ಹವಾಮಾನವು ನಾಲ್ಕು ದಿನಗಳ ವಿಳಂಬವನ್ನುಂಟು ಮಾಡಿದ್ದರೂ ಇದನ್ನು ಲೆಕ್ಕಿಸದೆ ತಂಡವು ತಮ್ಮ ಯಾತ್ರೆಯನ್ನು ಮುಂದುವರೆಸಿ ಯಶಸ್ವಿಯಾಯಿತು.

ವಿದ್ಯಾರ್ಥಿಗಳು ಸಹನೆ, ತಾಳ್ಮೆಯಿಂದ ವಿಶ್ವದ ಅತಿ ಎತ್ತರದ ಶಿಖರ ತಲುಪಲು ಒಂದು ವಾರ ಶ್ರಮಿಸಿ ಶಿಖರವನ್ನು ದಾಟಿತು. ಅಂತಿಮವಾಗಿ ತೆಂಗ್ಬೊಶೆ, ದಿಂಗ್ಬೋಶೆ, ಫೆರಿಶೆ, ಲೊಬುಶೆ ಮತ್ತು ಗೋರಕ್ಶೆಪ್ ಗಳಂತಹ ಹಿಮಾಲಯದ ಗ್ರಾಮಗಳನ್ನು ದಾಟಿದ ನಂತರ, ವಿದ್ಯಾರ್ಥಿಗಳ ತಂಡವು ಎವೆರೆಸ್ಟ್ ಬೇಸ್ ಕ್ಯಾಂಪ್ (ಇಬಿಸಿ) ನಲ್ಲಿ ೫೩೬೫ ಮೀ ಎತ್ತರದಲ್ಲಿ ಇಂಡಸ್ ಶಾಲೆಯ ಬಾವುಟವನ್ನು ಹಾರಿಸಿದರು.

ಶಿಖರ ಏರುವಾಗ ಒಂದು ಕ್ಷಣವೂ ಹೆದರಿಕೆಯಾಯಿತು ಎಂದು ನನಗೆ ಅನಿಸಲಿಲ್ಲ. ನಾವು ನಮ್ಮ ಗುರಿಯನ್ನು ತಲುಪುತ್ತೇವೆ ಎಂಬ ನಂಬಿಕೆಯಿತ್ತು. ಎಷ್ಟಾದರೂ ನಾವು ಅದಕ್ಕೆ ಬಹಳ ಶ್ರಮದಿಂದ ಸಿದ್ಧತೆ ನಡೆಸಿದ್ದೆವು ಎನ್ನುತ್ತಾರೆ ಆರೋಹಣ ತಂಡದ ಸದಸ್ಯೆಯಾಗಿದ್ದ ೧೧ ತರಗತಿಯ ವಿದ್ಯಾರ್ಥಿನಿಜುಜಾನ್ನಾ ಲಾಜ್ಲೋ

ಈ ಆರೋಹಣದ ಸಿದ್ಧತೆಯ ಭಾಗವಾಗಿ, ತಂಡವನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಜ್ಜುಗೊಳಿಸಲು ಶಾಲೆಯು ಒಂದು ದೇಹದಾರ್ಢ್ಯದ ಕ್ರಮವನ್ನು ಸ್ಥಾಪಿಸಿತ್ತು. ಇದೊಂದು ಅದ್ಯಾತ್ಮಿಕ ಅನುಭವವಾಗಿದ್ದು ಇಲ್ಲಿ ವಿದ್ಯಾರ್ಥಿಗಳು ಹಿಮಾಲಯಗಳ ಅಗಾಧತೆಯನ್ನು ಮಾತ್ರವಲ್ಲದೆ, ಮಾನಸಿಕ ದೃಢತೆ, ಸ್ಥಿರತೆ ಮತ್ತು ಗುರಿಯ ಏಕಾಗ್ರತೆಯ ಗುಣಗಳನ್ನೂ ಬೆಳೆಸಿಕೊಂಡರು. ಎವೆರೆಸ್ಟ್ ಬೇಸ್ ಕ್ಯಾಂಪ್ ಆರೋಹಣವೂ ಅಂತಹ ಒಂದು ಪರಿಶ್ರಮವಾಗಿತ್ತು ಎಂದು ಆರೋಹಣದ ನಾಯಕ ಮಿತೇಶ್ ಸಿಂಘ್ ಹೇಳುತ್ತಾರೆ.

Leave a Comment