ಎವುಡ್ರಾ ..ಎಂದುಕಿ ವಚ್ಚಾವು..ಏಮಿ ಕಾವಾಲಿ.. ರೆಡ್ಡಿ ಅತ್ತೆಯ ಆಕ್ರೋಶ

ಬಳ್ಳಾರಿ,.೮-  ಎವುಡ್ರಾ ನುವ್ವು ..?  ಎಂದುಕಿ ವಚ್ಚಾವು..?

ಬೆಳ್ಳಂಬೆಳಿಗ್ಗೆ ಜನಾರ್ಧನ ರೆಡ್ಡಿ ಅವರ ಸಿರಗುಪ್ಪ ರಸ್ತೆಯಲ್ಲಿರುವ ಅಹಂಬಾವಿ ನಿವಾಸದ ಮೇಲೆ ಕೇಂದ್ರೀಯ ಅಪರಾಧ ವಿಭಾದ(ಸಿಸಿಬಿ) ಅಧಿಕಾರಿಗಳ ತಂಡ ದಾಳಿ ನಡೆಸುತ್ತಿದ್ದಂತೆ ಸಿಡಿಮಿಡಿಗೊಂಡ ರೆಡ್ಡಿ ಅತ್ತೆ ನಾಗಲಕ್ಷಮ್ಮ ಅಧಿಕಾರಿಗಳ ಮೇಲೆ ಕೂಗಾಟ ಆರಂಭಿಸಿ ಅರ್ಭಟಿಸಿದ್ದಾರೆ.

ನಸುಕಿನಲ್ಲಿ ಸಿಸಿಬಿಯ ೮ ಮಂದಿ ಅಧಿಕಾರಿಗಳ ತಂಡ ಮನೆಯವರು ಕಣ್ಣು ಬಿಡುವುದರೊಳಗೆ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಮನೆಯಲ್ಲಿದ್ದ ಅತ್ತೆ  ನಾಗಕ್ಷ್ಮಮ್ಮ ಅವರು ಅಧಿಕಾರಿಗಳ ಕಂಡು ಕೂಗಾಟ ನಡೆಸಿದ್ದಾರೆ ಎನ್ನಲಾಗಿದೆ.

ಎವುಡ್ರಾ ನುವ್ವು .?  ಎಂದುಕಿ ವಚ್ಚಾವು..? ಏಮಿ ಕಾವಾಲಿ, ಮನೆಯಲ್ಲಿ ಮಗಳು ಹಾಗೂ ಅಳಿಯ ಇಲ್ಲದ ವೇಳೆ ಏಕೆ ಆಗಮಿಸಿದ್ದೀರಿ. ಮಗಳು, ಅಳಿಯ ಬಂದ ಮೇಲೆ ಬನ್ನಿ ಎಂದು ಹೇಳಿದ್ದಾರೆ ಎಂದು ಕೂಗಡಿದ್ದಾರೆ.

ನಾಗಲಕ್ಷ್ಮಮ್ಮ ಕೂಗಾಟ ಜೋರಾಗುತ್ತಿದ್ದಂತೆ ಅಧಿಕಾರಿಗಳು ಮಾಹಿತಿ ನೀಡಿ ಮಹಿಳಾ ಪೊಲೀಸರನ್ನು ಕರೆಸಿಕೊಂಡಿದ್ದಾರೆ.ಸದ್ಯ ಪರಿಶೀಲನೆ ನಡೆಯುವವರೆಗೂ ನಾಗಕ್ಷ್ಮಮ್ಮ ಮಹಿಳಾ ಅಧಿಕಾರಿಯ ವಶದಲ್ಲಿ ಇರಲಿದ್ದಾರೆ.

ಕಳೆದ ಬಾರಿ ಮೊಮ್ಮಗಳ ಮದುವೆ ವೇಳೆಯೂ ಇದೇ ರೀತಿ ದಾಳಿ ನಡೆಸಿ ಮನೆಯಲ್ಲಿನ ಸಂಭ್ರಮ ಹಾಳು ಮಾಡಿದ್ದರು. ಇಂದು ದೀಪಾಳಿಯ ಹಬ್ಬದ ಸಂಭ್ರಮದ ವೇಳೆಯೂ ಇದೇ ರೀತಿ ಮಾಡಿದ್ದಾರೆ ಎಂಬ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪೊಲೀಸರ ದಾಳಿ ವೇಳೆ ಜನಾರ್ದನ ರೆಡ್ಡಿ ಮನೆಯಲ್ಲಿ ಅತ್ತೆ ನಾಗ ಲಕ್ಷ್ಮಮ್ಮ ಅವರನ್ನು ಹೊರತು ಪಡಿಸಿ ಮನೆಯಲ್ಲಿ ಯಾರು ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮನೆಯಲ್ಲಿ ಕೆಲಸ ಮಾಡುವ ಮಂದಿ ಇದ್ದರು ಅಷ್ಟೇ.

ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ಶ್ರೀರಾಮುಲು ಸ್ಥಳಕ್ಕೆ ಆಗಮಿಸಿ ಪೊಲೀಸರ ಪರಿಶೀಲನೆಗೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆಯೇ ರೆಡ್ಡಿ ಅವರ ಅತ್ತೆಯೂ ಸ್ಥಳಕ್ಕೆ ಆಗಮಿಸಿದ್ದಾರೆ.

ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿಗೆ ತಲುಪಿದೆ ಎನ್ನಲಾದ ೫೭ ಕೆಜಿ ಚಿನ್ನಕ್ಕಾಗಿ ಪೊಲೀಸರು ಬೆಳಗ್ಗೆಯಿಂದಲೂ ಶೋಧಕಾರ್ಯ ನಡೆಸಿದ್ದು, ಮನೆಯ ಎಲ್ಲ ಭಾಗಗಳಲ್ಲಿ ಪರಿಶೀಲನೆಯ ಕಾರ್ಯ ನಡೆಸಿದ್ದಾರೆ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ. ಸದ್ಯ ರೆಡ್ಡಿ ನಾಪತ್ತೆಯಾಗಿದ್ದಾರೆ.

Leave a Comment