ಎಲ್ ಟಿ ಮೀಸಲಾತಿ ಸಂಬಂಧ ಸಿಕ್ಕಿಂ ಕ್ರಾಂತಿ ಮೋರ್ಚಾ ಸರ್ಕಾರದೊಂದಿಗೆ ಸಹಕಾರ : ಪ್ರಧಾನಿ ಭರವಸೆ

ಗ್ಯಾಂಗ್‌ಟಾಕ್, ಜೂ 13 – ಸಿಕ್ಕಿಂ ರಾಜ್ಯ ವಿಧಾನಸಭೆಯಲ್ಲಿ ಲಿಂಬೋ ತಮಾಂಗ್ (ಎಲ್ ಟಿ) ಮೀಸಲಾತಿ ಸಂಬಂಧ  ನೂತನ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಸರ್ಕಾರಕ್ಕೆ ಸಹಕಾರ ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಸಿಕ್ಕಿಂ ನಲ್ಲಿನ ಎಲ್ ಟಿ ಸಮುದಾಯದ ರಾಜಕೀಯ ಹಕ್ಕುಗಳ ವಿಚಾರವನ್ನು ಶೀರ್ಘ ಇತ್ಯರ್ಥಪಡಿಸುವಂತೆ ಮುಖ್ಯಮಂತ್ರಿ ಪಿ.ಎಸ್‌.ಗೋಲೆ ಮನವಿ ಮಾಡಿದ್ದಾರೆ.

ರಾಜಕೀಯದಿಂದ ದೂರ ಇರುವ ಪರಿಶಿಷ್ಟ ಪಂಗಡದ 11 ಉಪಪಂಗಡಗಳನ್ನು ಸೇರ್ಪಡೆಗಳಿಸುವ ಸಂಬಂಧ ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಯ್, ಗುರುಂಗ್, ಯಾಖ, ಮಂಗೇರ್, ಭುಜೇಲ್, ಸುನುವಾರ್, ಮುಖಿಯಾ, ಥಾಮಿ ಕುಸ್, ನೇವಾರ್, ಜೋಗಿ – ಸನ್ಯಾಸಿ ಹೊರಗುಳಿದಿರುವ ಪಂಗಡಗಳಾಗಿವೆ.

ಈ ಪಂಗಡಗಳ ಸೇರ್ಪಡೆಗೆ ಪ್ರಸ್ತುತ ನಿಯಮಾವಳಿಗೆ ತಿದ್ದುಪಡಿ ತರುವಂತೆಯೂ ಸಹ ಮುಖ್ಯಮಂತ್ರಿ ಕೋರಿದ್ದಾರೆ.

Leave a Comment