ಎಲ್.ಎಲ್.ಸಿ ಕಾಮಗಾರಿ ಪ್ರಶ್ನಿಸಿದ್ದಕ್ಕೆ ರೈತ ಮುಖಂಡರಿಗೆ ಗುತ್ತಿಗೆದಾರರಿಂದ ಬೆದರಿಕೆ

ಬಳ್ಳಾರಿ, ಜೂ.13: ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆಯ ಲೈನಿಂಗ್ ಕಾಮಗಾರಿ ಅಧಿಕಾರಿಗಳ ಭರವಸೆಯಂತೆ ಸ್ಥಗಿತಗೊಳಿಸಲು ಮನವಿ ಮಾಡಿದರೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ರೈತ ಮುಖಂಡರಿಗೆ ಬೆದರಿಕೆ ಹಾಕಿದ್ದಾರೆ. ರೈತ ಸಂಘದ ಕಾರ್ಯಕರ್ತರಿಗೆ ಏನೇ ಆದರೂ ಸರ್ಕಾರವೇ ಹೊಣೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಜೆ.ಕಾರ್ತಿಕ್ ಹೇಳಿದ್ದಾರೆ.

ಅವರಿಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಜೂನ್ 10 ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಿದಾಗ ಸಹಾಯಕ ಆಯುಕ್ತರು, ತುಂಗಭದ್ರ ಬೋರ್ಡಿನ ಅಧಿಕಾರಿಗಳು ಇದ್ದರು.

ಆಗ ಎಲ್.ಎಲ್.ಸಿ ಕಾಲುವೆ ಲೈನಿಂಗ್ ಮಾಡುವಾಗ ಆಗುತ್ತಿರುವ ಕಾಲುವೆಯ ಸ್ವರೂಪದ ಬದಲಾವಣೆಯಿಂದ ರೈತರಿಗೆ ತೊಂದರೆಯಾಗಲಿದೆ. ನಮ್ಮ ಡಿಸ್ಟ್ರಿಬ್ಯೂಟರ್ ಗಳಿಗೆ ಅವಶ್ಯ ನೀರು ದೊರೆಯುವುದಿಲ್ಲ ಎಂಬ ಅನುಮಾನ ನಮಗಿದೆ. ಅದಕ್ಕಾಗಿ ಈ ಸಮಸ್ಯೆ ಬಗೆಹರಿಸುವವರೆಗೆ ಕಾಮಗಾರಿ ಸ್ಥಗಿತಗೊಳಿಸಲು ಕೇಳಿತ್ತು.

ಅದಕ್ಕೆ ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬರುವ 5 ದಿನದಲ್ಲಿ ಸಭೆ ಕರೆದು ನಿಮ್ಮ ಅನುಮಾನಕ್ಕೆ ಅಧಿಕಾರಿಗಳಿಂದ ಉತ್ತರ ನೀಡಲಿದೆ ಅಲ್ಲಿವರೆಗೆ ನೀವು ಹೇಳಿದಂತೆ ಕಾಮಗಾರಿ ನಿಲ್ಲಿಸುವುದಾಗಿ ಹೇಳಿತ್ತು.

ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಮುಂದುವರಿಸಿದ್ದನ್ನು ಸಂಘದ ಸಿರುಗುಪ್ಪ ತಾಲೂಕು ಅಧ್ಯಕ್ಷ ದೇವರೆಡ್ಡಿ ಪ್ರಶ್ನಿಸಿದ್ದಕ್ಕೆ ಗುತ್ತಿಗೆದಾರ ಭೂಪಾಲರೆಡ್ಡಿ ಅವರು 9482110777 ನಂಬರ್ ಮೊಬೈಲ್ ನಲ್ಲಿ ಕರೆ ಮಾಡಿ ಕಾಮಗಾರಿ ಸ್ಥಗಿತ ಗೊಳಿಸಲು ಬಂದರೆ ಹುಷಾರ್ ನಿಮ್ಮನ್ನು ನೋಡಿಕೊಳ್ಳಬೇಕಾಗುತ್ತೆ ಎಂದು ಬೆದರಿಕೆ ಹಾಕಿದ್ದಾರೆಂದು ಹೇಳಿದರು.

ಅದಕ್ಕಾಗಿ ರೈತರಿಗೆ ನ್ಯಾಯ ಒದಗಿಸಲು ಹೋರಾಟ ಮಾಡುವ ಸಂಘದ ಕಾರ್ಯಕರ್ತನಿಗೆ ತೊಂದರೆ ಆದರೆ ಗುತ್ತಿಗೆದಾರ ಮತ್ತು ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಹೇಳಿದರು.

ನಮಗೆ ಅಧಿಕಾರಿಗಳು ಕೊಟ್ಟ ಮಾತಿನಂತೆ ಕಾಮಗಾರಿಯಿಂದ ರೈತರಿಗೆ ತೊಂದರೆ ಆಗಲ್ಲ ಎಂಬುದನ್ನು ಮನವರಿಕೆ ಮಾಡಬೇಕೆಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದತ ಮುಖಂಡರುಗಳಾದ ಬಿ.ವಿ.ಗೌಡ, ನಾರಾಯಣರೆಡ್ಡಿ, ಕಾಸಿಂಸಾಬ್, ದೇವರೆಡ್ಡಿ, ಜಡೆಪ್ಪ ಮೊದಲಾದವರು ಇದ್ದರು.

Leave a Comment