ಎಲ್ಲೆಡೆ ಫಿಫಾ ಜ್ವರ: ಒಂದೇ ಗಂಟೆಯಲ್ಲಿ ೧೨೦,೦೦೦ ಟಿಕೆಟ್ ಮಾರಾಟ

ರಷ್ಯಾ, ಜೂ ೧೧- ರಷ್ಯಾದಲ್ಲಿ ನಡೆಯಲಿರುವ ಫುಟ್‌ಬಾಲ್ ವಿಶ್ವಕಪ್‌ಗೆ ದಿನಗಣನೆ ಶುರುವಾಗಿರುವ ಬೆನ್ನಲೇ ಫಿಫಾ ಟಿಕೆಟ್ ಬಿಡುಗಡೆ ಮಾಡಿ ಒಂದೇ ಗಂಟೆಯಲ್ಲಿ ೧೨೦,೦೦೦ ಟಿಕೆಟ್ ಮಾರಾಟವಾಗಿದೆ.

ಇಡೀ ವಿಶ್ವದ್ಯಾದಂತ ಫಿಫಾ ಜ್ವರ ಹೆಚ್ಚಾಗುತ್ತಿದ್ದು, ಟಿಕೆಟ್ ಪಡೆಯಲು ಅಭಿಮಾನಿಗಳು ಆನ್‌ಲೈನ್ ಸೇರಿದಂತೆ ಎಲ್ಲೆಡೆ ಮುಗಿಬಿದ್ದಿದ್ದಾರೆ. ಫಿಫಾ ಪಂದ್ಯಗಳ ಟಿಕೆಟ್ ಮಾರಾಟ ಶುರು ಮಾಡಿದ ಒಂದೇ ಗಂಟೆಯಲ್ಲಿ ೧೨೦,೦೦೦ ಟಿಕೆಟ್ ಮಾರಾಟವಾಗಿದೆಯಂತೆ. ಇದು ದಿನ ದಿನಕ್ಕೂ ಫಿಫಾ ಜ್ವರದ ಕಾವು ಎಷ್ಟಿದೆ ಎಂಬುದನ್ನು ತೋರಿಸಿದೆ.

ಫಿಫಾಡಾಟ್ ಕಾಂ ಹಾಗೂ ಟಿಕ್ಟ್ರಸ್ ವೆಬ್ ಸೈಟ್ ನಲ್ಲಿ ಟಿಕೆಟ್ ಬಿಡುಗಡೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಿದೆ. ಜುಲೈ ೧೫ರವರೆಗೆ ಟಿಕೆಟ್ ಮಾರಾಟ ನಡೆಯಲಿದೆ. ವಿಶ್ವಕಪ್ ಟಿಕೆಟ್ ಮಾರಾಟದ ಸುದ್ದಿ ತಿಳಿಯುತ್ತಿದ್ದಂತೆ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳು ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದಾರೆ. ಟಿಕೆಟ್ ಸಿಕ್ಕಿಲ್ಲದವರು ನಿರಾಶೆಯಾಗಬೇಕಿಲ್ಲ. ಮತ್ತೆ ವೆಬ್‌ಸೈಟ್‌ನಲ್ಲಿ ಟಿಕೆಟ್ ಮಾರಾಟ ನಡೆಯಲಿದೆ.

ಟಿಕೆಟ್ ಪಡೆದ ಅಭಿಮಾನಿಗಳಿಗೆ ಪಂದ್ಯ ನೋಡಲು ಸಾಧ್ಯವಾಗದ ಸಂದರ್ಭದಲ್ಲಿ ಇದೇ ವೆಬ್‌ಸೈಟ್ ಮೂಲಕ ಟಿಕೆಟ್ ಮಾರಾಟ ಮಾಡಬಹುದಾಗಿದೆ. ಅನೇಕ ಪಂದ್ಯಗಳ ಟಿಕೆಟ್ ಇನ್ನೂ ಬಿಡುಗಡೆಯಾಗಿಲ್ಲ. ಶೀಘ್ರದಲ್ಲಿಯೇ ಎಲ್ಲ ಪಂದ್ಯಗಳ ಟಿಕೆಟ್ ಅಭಿಮಾನಿಗಳಿಗೆ ಲಭ್ಯವಾಗುವ ಸಾಧ್ಯತೆಯಿದೆ. ಅಕ್ರಮ ಟಿಕೆಟ್ ಮಾರಾಟ ದಂಧೆ ಅನೇಕ ದೇಶಗಳಲ್ಲಿ ನಡೆಯುತ್ತಿದ್ದು, ಅದರ ಕಡಿವಾಣಕ್ಕೆ ಕಠಿಣ ತೀರ್ಮಾನ ತೆಗೆದುಕೊಳ್ಳಲಾಗಿದೆ.

Leave a Comment