ಎಲ್ಲೆಡೆ ಕಿಚ್ಚ ಪೈಲ್ವಾನ್  ಹವಾ

ಬೆಂಗಳೂರು, ಸೆ 12 – ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ “ಪೈಲ್ವಾನ್ ಮೊದಲ ದಿನವೇ ಹವಾ ಎಬ್ಬಿಸಿದ್ದು, ರಾಜ್ಯಾದ್ಯಂತ ಚಿತ್ರಮಂದಿರಗಳ ಭರ್ತಿಯಾಗಿವೆ ಜತೆಗೆ ವಿಶ್ವಾದ್ಯಂತ ತೊಡೆ ತಟ್ಟುತ್ತಿದ್ದಾನೆ

“ಎಲ್ಲೆಡೆ ಕಿಚ್ಚನ ಖದರ್ ಪೈಲ್ವಾನ್ ವೆದರ್” ಎಂಬಂತಾಗಿದ್ದು, ಬಲವಾದ ಉದ್ದೇಶಕ್ಕೆ ಕುಸ್ತಿಯಾಡುವ ಅಖಾಡದಲ್ಲಿ ಸುದೀಪ್ ಗೆದ್ದಿದ್ದಾರೆ

ಸಾಮಾಜಿಕ ಜಾಲತಾಣದಲ್ಲಿಯೂ ಚಿತ್ರದ ಬಗ್ಗೆ ಮೆಚ್ಚುಗೆಯ ಸುರಿಮಳೆಯಾಗಿದೆ “ಪಂಚ ಭಾಷೆಯಲ್ಲಿಯೂ ಪೈಲ್ವಾನ್ ಗೆಲುವು ಸಾಧಿಸಲಿ” ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹಾರೈಸಿದ್ದಾರೆ

ನಟ ಜಗ್ಗೇಶ್, “ಬನ್ನೂರಿನಲ್ಲಿ ತೋತಾಪುರಿ ಚಿತ್ರೀಕರಣಕ್ಕೆ ಹೊರಟಿದ್ದಾಗ ಚಿತ್ರಮಂದಿರದ ಮುಂದೆ ಪೈಲ್ವಾನ್ ಅಭಿಮಾನಿಗಳನ್ನು ಕಂಡು ಸಂತೋಷವಾಯಿತು” ಎಂದು ಬರೆದುಕೊಂಡಿದ್ದಾರೆ

“ದೇವರು ಎಲ್ಲರಿಗೂ ಕನಸು ಕೊಟ್ಟಿರ್ತಾನೆ ಆದರೆ ಹಸಿವು ಆ ಎಲ್ಲ ಕನಸುಗಳನ್ನು ತಿಂದುಬಿಡುತ್ತದೆ” ಎಂಬ ಡೈಲಾಗ್ ಎಲ್ಲರೂ ಹೌದು ಎನ್ನುವಂತೆ ಮಾಡಿದ್ದು ಅಭಿಮಾನಿಗಳ ಹಾರೈಕೆಗೆ ಕಿಚ್ಚ ಸುದೀಪ್ ಧನ್ಯವಾದ ಸಲ್ಲಿಸಿದ್ದಾರೆ.

Leave a Comment