ಎಲೆ ತೋಟ ವೃತ್ತಕ್ಕೆ ನಾಮಕರಣ

ಮೈಸೂರು. ಜು. 14. ನಗರದ ಊಟಿ-ಬೆಂಗಳೂರು ರಸ್ತೆಯಲ್ಲಿ ಬರುವ ಎಲೆ ತೋಟ ವೃತ್ತಕ್ಕೆ ಇಂದು ಬೆಳಿಗ್ಗೆ ಮೈಸೂರು ಮಹಾ ನಗರ ಪಾಳಿಕೆಯ ಮೇಯರ್ ಪುಷ್ಪಲತಾ ಜಗನ್ನಾಥ್. ಗಣಪತಿ ಸಚ್ಚಿದಾನಂದ ವೃತ್ತ ಎಂದು ನಾಮಕರಣ ಮಾಡಿದರು.
ಈ ಸಂಧರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಹಲವಾರು ಜನೋಪಯೋಗಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು ನಗರ ಸೇರಿದಂತೆ ಇನ್ನಿತರ ಜಿಲ್ಲೆಗಳ ಭಕ್ತಾಧಿಗಳ ಜನಮನ ಗೆದ್ದಿರುವುದನ್ನು ಸ್ಮರಿಸಿದರು. ಇಷ್ಟೊಂದು ಜನಪ್ರಿಯತೆಗಳಿಸಿರುವ ಶ್ರೀ ಸಚ್ಚಿದಾನಂದ
ಸ್ವಾಮೀಜಿಯವರ ಹೆಸರನ್ನು ನಗರದ ಯಾವುದಾದರೊಂದು ವೃತ್ತಕ್ಕೆ ಇಡುವಂತೆ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು. ಇದಕ್ಕೆ ಎಲೆತೋಟದ ವೃತ್ತ ಸೂಕ್ತ ಎಂದು ಪಾಳಿಕೆಯ ಸದಸ್ಯರುಗಳು ಅನುಮೋದಿಸಿದ್ದರ ಹಿನ್ನಲೆಯಲ್ಲಿ ಅವರ ಹೆಸರನ್ನು ಈ ವೃತ್ತಕ್ಕೆ ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಸಂದೇಶ್
ಸ್ವಾಮಿಯವರು ಮೇಯರ್ ಆಗಿದ್ದ ಸಂಧರ್ಭದಲ್ಲಿಯೂ ಚರ್ಚಿ ನೆಡೆದಿತ್ತು ಎಂಬುದನ್ನು ನೆನಪು ಮಾಡಿಕೊಟ್ಟರು.
ಸುತ್ತೂರು ಮಠದ ಕಿರಿಯ ಸ್ವಾಮೀಜಿ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ವೃತ್ತವನ್ನು ಲೋಕಾರ್ಪಣೆ ಮಾಡಿದರು.

Leave a Comment